ಸಾರಾಂಶ
ಗಾಜಿಯಾಬಾದ್ ಹೆಸರನ್ನು ಬದಲಾವಣೆ ಮಾಡಲು ಮೂರು ಹೆಸರುಗಳನ್ನು ನಗರ ಪಾಲಿಕೆ ಪ್ರಸ್ತಾವಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅವಗಾಹನೆಗೆ ಕಳುಹಿಸಿಕೊಡಲಾಗಿದೆ.
ನವದೆಹಲಿ: ಉತ್ತರ ಪ್ರದೇಶದ ಗಾಜಿಯಾಬಾದ್ ನಗರವನ್ನು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಮಂಗಳವಾರ ಗಾಜಿಯಾಬಾದ್ ನಗರ ಪಾಲಿಕೆಯು ಬಹುಮತದೊಂದಿಗೆ ಅಂಗೀಕರಿಸಿದೆ.
ಗಾಜಿಯಾಬಾದ್ ಹೆಸರಿಗೆ ಪರ್ಯಾಯವಾಗಿ ‘ಹರನಂದಿ ನಗರ, ಗಜಪ್ರಸ್ಥ ಮತ್ತು ದೂಧೇಶ್ವರನಾಥ್ ನಗರ’ ಎಂಬ 3 ಹೆಸರುಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕಳುಹಿಸಲಾಗುವುದು.
ಗಾಜಿಯಾಬಾದ್ ಮತ್ತು ಹಿಂದೂ ಸಂಘಟನೆಗಳ ಜನರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಹೆಸರುಗಳನ್ನು ಸೂಚಿಸಲಾಗಿದೆ ಎಂದು ಮೇಯರ್ ಸುನಿತಾ ದಯಾಳ್ ತಿಳಿಸಿದ್ದಾರೆ.
ಈ ಹಿಂದೆ ಅಲಹಾಬಾದ್ ನಗರವನ್ನು ಪ್ರಯಾಗ್‌ರಾಜ್, ಮೊಘಲ್ ಸರಾಯ್ ಅನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಗರ ಎಂದು ಮತ್ತು ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಜಿಲ್ಲೆ ಎಂದು ಯೋಗಿ ಸರ್ಕಾರ ಅನೇಕ ನಗರಗಳ ಹೆಸರನ್ನು ಬದಲಿಸಿತ್ತು. ಆಗಿನಿಂದ ಗಾಜಿಯಾಬಾದ್ ನಗರದ ಮರುನಾಮಕರಣಕ್ಕೆ ಬೇಡಿಕೆ ತೀವ್ರವಾಗಿತ್ತು.