ಉತ್ತರಾ ಖಂಡ : ಪ್ರತಿಭಟನೆ ಆಯೋಜಕರಿಂದಲೇ ನಷ್ಟವನ್ನು ವಸೂಲಿ ಮಾಡುವ ಕಾನೂನು ಜಾರಿಗೆ

| Published : Sep 21 2024, 01:59 AM IST / Updated: Sep 21 2024, 06:31 AM IST

ಸಾರಾಂಶ

ಉತ್ತರಾಖಂಡದಲ್ಲಿ ಪ್ರತಿಭಟನೆಗಳು ಮತ್ತು ಗಲಭೆಗಳ ಸಮಯದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿಯಾದರೆ ಪ್ರತಿಭಟನಾಕಾರರಿಂದ ನಷ್ಟವನ್ನು ವಸೂಲಿ ಮಾಡುವ ಕಾನೂನನ್ನು ಜಾರಿಗೆ ತರಲಾಗಿದೆ.  

ಡೆಹ್ರಾಡೂನ್: ಪ್ರತಿಭಟನೆ ಮತ್ತು ಗಲಾಭೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದರೆ, ಪ್ರತಿಭಟನೆ ಆಯೋಜಕರಿಂದಲೇ ನಷ್ಟವನ್ನು ವಸೂಲಿ ಮಾಡುವ ಕಾನೂನು ಉತ್ತರಾಖಂಡದಲ್ಲಿ ಜಾರಿಗೆ ಬಂದಿದೆ. ಈ ಕುರಿತ ಕಾಯ್ದೆಗೆ ರಾಜ್ಯಪಾಲರ ಅನುಮೋದನೆ ಸಿಕ್ಕಿದೆ.

ಉತ್ತರಾಖಂಡ್‌ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ವಸೂಲಾತಿ ಮಸೂದೆಯನ್ನು ರಾಜ್ಯ ಸರ್ಕಾರ ಕಳೆದ ತಿಂಗಳು ವಿಧಾನಸಭೆಯಲ್ಲಿ ಅಂಗೀಕರಿಸಿ, ರಾಜ್ಯಪಾಲರ ಒಪ್ಪಿಗೆಗಾಗಿ ಕಾಯುತ್ತಿತ್ತು . ಆದರೆ ಇದೀಗ ಗವರ್ನರ್‌ ಗುರ್ಮಿತ್ ಸಿಂಗ್ ಸಮ್ಮತಿ ಸೂಚಿಸಿದ್ದಾರೆ.

ರಾಜ್ಯಪಾಲರ ಅನುಮತಿಗೆ ಸಂತಸ ವ್ಯಕ್ತ ಪಡಿಸಿರುವ ಪುಷ್ಕರ್ ಸಿಂಗ್, ‘ಹಾನಿಗೊಳಗಾದ ಸೊತ್ತಿನ ಪ್ರತಿ ಪೈಸೆಯನ್ನು ಅದಕ್ಕೆ ಕಾರಣವಾದ ವ್ತಕ್ತಿಯಿಂದ ವಸೂಲಿ ಮಾಡಿಸಲಾಗುವುದು. ನಷ್ಟದ ಸಂಪೂರ್ಣ ಹಣವನ್ನು ಅವರಿಂದ ಮಸೂಲಿ ಮಾಡುವುದರ ಜೊತೆಗೆ 8 ಲಕ್ಷ ರು. ತನಕ ದಂಡ ವಿಧಿಸಲಾಗುತ್ತದೆ ’ ಎಂದಿದ್ದಾರೆ.