ಸಾರಾಂಶ
ಭಾರತದ ದಾಳಿ ಬಹುತೇಕ ಖಚಿತ ಎಂಬ ಭೀತಿ ಬುಧವಾರ ಪಾಕಿಸ್ತಾನ ಷೇರುಪೇಟೆ ಭಾರೀ ಪ್ರಮಾಣದಲ್ಲಿ ಕುಸಿಯುವಂತೆ ಮಾಡಿದೆ
ಕರಾಚಿ: ಪಹಲ್ಗಾಂ ನರಮೇಧದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಭಾರತದ ದಾಳಿ ಬಹುತೇಕ ಖಚಿತ ಎಂಬ ಭೀತಿ ಬುಧವಾರ ಪಾಕಿಸ್ತಾನ ಷೇರುಪೇಟೆ ಭಾರೀ ಪ್ರಮಾಣದಲ್ಲಿ ಕುಸಿಯುವಂತೆ ಮಾಡಿದೆ ಪಾಕಿಸ್ತಾನದ ಷೇರುಪೇಟೆಯ ಪಿಎಸ್‌ಎಕ್ಸ್ ಸೂಚ್ಯಂಕ 3000 ಅಂಕಗಳಷ್ಟು ಕುಸಿತ ಕಂಡಿದೆ.
ಇನ್ನೊಂದೆಡೆ ಕೆಎಸ್‌ಇ ಸೂಚ್ಯಂಕವು 1717 ಅಂಕಗಳಷ್ಟು ಕುಸಿತ ಕಂಡು ದಿನದ ಅಂತ್ಯಕ್ಕೆ 1,13,154ರಲ್ಲಿ ಮುಕ್ತಾಯಗೊಂಡಿತು. ಇನ್ನು ಪಿಎಸ್‌ಎಕ್ಸ್ 3255 ಅಂಕ ಇಳಿಕೆಯಾಯಿತು. ಪಾಕ್ ಸಚಿವ ಅತಾವುಲ್ಲಾ ಮುಂದಿನ 24-36 ಗಂಟೆಗಳಲ್ಲಿ ಭಾರತ ದಾಳಿ ಮಾಡಲಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಈ ಅನಿಶ್ಚಿತತೆ ಉಂಟಾಗಿದೆ.