ಸಿಖ್ಖರ ಧರ್ಮಗ್ರಂಥವಾಗಿರುವ ಗುರು ಗ್ರಂಥ್ ಸಾಹಿಬ್‌ನ ಘನತೆಗೆ ಚ್ಯುತಿ ಬರೆದಂತೆ ತಡೆಯುವ ಉದ್ದೇಶದಿಂದ ಪಂಜಾಬ್ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದೆ.
ಚಂಡೀಗಢ: ಸಿಖ್ಖರ ಧರ್ಮಗ್ರಂಥವಾಗಿರುವ ಗುರು ಗ್ರಂಥ್ ಸಾಹಿಬ್‌ನ ಘನತೆಗೆ ಚ್ಯುತಿ ಬರೆದಂತೆ ತಡೆಯುವ ಉದ್ದೇಶದಿಂದ ಪಂಜಾಬ್ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದೆ. ಇದರ ಪ್ರಕಾರ ಇನ್ನು ಗ್ರಂಥಕ್ಕೆ ಅವಮಾನಿಸಿದರೆ ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ ಶಿಕ್ಷೆ ಮತ್ತು ಕನಿಷ್ಠ 5 ಲಕ್ಷ, ಗರಿಷ್ಠ 25 ಲಕ್ಷ ರು.ದಂಡ ವಿಧಿಸಲಾಗುವುದು.
ಜಾಗತ್ ಜೋತ್ ಶ್ರೀ ಗುರು ಗ್ರಂಥ ಸಾಹಿಬ್ ಸತ್ಕಾರ್ ಮಸೂದೆ
ತಾವು ಮಂಡಿಸಿದ ಜಾಗತ್ ಜೋತ್ ಶ್ರೀ ಗುರು ಗ್ರಂಥ ಸಾಹಿಬ್ ಸತ್ಕಾರ್ (ತಿದ್ದುಪಡಿ) ಮಸೂದೆ ಅಂಗೀಕಾರವಾಗಿದ್ದಕ್ಕೆ ಸಿಎಂ ಭಗವಂತ್ ಮಾನ್ ಸಂತಸ ವ್ಯಕ್ತಪಡಿಸಿದ್ದು, ‘ಇದು ಧರ್ಮನಿಂದನೆ ಕೃತ್ಯಗಳ ವಿರುದ್ಧ ಬಲವಾದ ಪ್ರತಿಬಂಧಕವಾಗಿ ಕೆಲಸ ಮಾಡುತ್ತದೆ’ ಎಂದರು. ಇದು ರಾಜ್ಯ ಮಸೂದೆಯಾದ ಕಾರಣ ರಾಷ್ಟ್ರಪತಿಗಳ ಅಂಕಿತದ ಅಗತ್ಯ ಇರುವುದಿಲ್ಲ. ರಾಜ್ಯಪಾಲರ ಒಪ್ಪಿಯಿಂದ ಕಾಯ್ದೆಯಾಗುವುದು.
ಗ್ರಂಥಕ್ಕೆ ಅಪಚಾರವೆಸಗಿ ಕೋಮು ಸೌಹಾರ್ದತೆಯನ್ನು ಕದಡುವ ಘಟನೆ
ಇತ್ತೀಚೆಗೆ ರಾಜ್ಯದಲ್ಲಿ ಆ ಗ್ರಂಥಕ್ಕೆ ಅಪಚಾರವೆಸಗಿ ಕೋಮು ಸೌಹಾರ್ದತೆಯನ್ನು ಕದಡುವ ಘಟನೆಗಳು ತಡೆದಿದ್ದವು. ಅವು ಮರುಕಳಿಸದಂತೆ ತಡೆಯಲು ಈ ಮಸೂದೆಯನ್ನು ಪರಿಚಯಿಸಲಾಗಿದೆ. ಬೇರಾವ ಧರ್ಮಗ್ರಂಥಗಳಿಗೂ ಇದು ಅನ್ವಯವಾಗದು.
