ಪಂಜಾಬಲ್ಲಿ ಪಾಕ್‌ ಬೆಂಬಲಿತ 2 ಉಗ್ರ ಜಾಲ ಪತ್ತೆ, 13 ಜನ ಸೆರೆ : ಬಂಧಿತರಿಂದ ಭಾರೀ ಶಸ್ತ್ರಾಸ್ತ್ರ ವಶ

| N/A | Published : Apr 20 2025, 01:45 AM IST / Updated: Apr 20 2025, 04:35 AM IST

ಸಾರಾಂಶ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲಿತ ಎರಡು ಖಲಿಸ್ತಾನಿ ಉಗ್ರ ಜಾಲವನ್ನು ಬಯಲಿಗೆಳೆಯುವಲ್ಲಿ ಪಂಜಾಬ್‌ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ 13 ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ ಭಾರೀ ಪ್ರಮಾಣ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚಂಡೀಗಢ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲಿತ ಎರಡು ಖಲಿಸ್ತಾನಿ ಉಗ್ರ ಜಾಲವನ್ನು ಬಯಲಿಗೆಳೆಯುವಲ್ಲಿ ಪಂಜಾಬ್‌ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ 13 ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ ಭಾರೀ ಪ್ರಮಾಣ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಒಂದು ಜಾಲವನ್ನು ಸತ್ನಾಮ್‌ ಸಿಂಗ್‌ ಎಂಬಾತ ಫ್ರಾನ್ಸ್‌ನಿಂದಲೇ ನಿರ್ವಹಿಸುತ್ತಿದ್ದ. ಎರಡನೇ ಜಾಲವನ್ನು ಜಸ್ವಿಂದರ್‌ ಎಂಬಾತ ಗ್ರೀಸ್‌ನಿಂದಲೇ ನಿರ್ವಹಿಸುತ್ತಿದ್ದ. ಬಬ್ಬರ್‌ ಖಾಲ್ಸಾ ಇಂಟರ್‌ನ್ಯಾಷನಲ್‌ನ ಭಾಗವಾದ ಈ ಎರಡೂ ಜಾಲಕ್ಕೆ ಐಎಸ್‌ಐನ ಬೆಂಬಲವಿತ್ತು. ಬಂಧಿತರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 2 ರಾಕೆಟ್‌ ಮೂಲಕ ಹಾರಿಸಬಹುದಾದ ಗ್ರೆನೇಡ್‌, ಲಾಂಚರ್‌, ತಲಾ 2.5 ಕೆಜಿ ತೂಗುವ 2 ಎಲ್‌ಇಡಿ, 2 ಹ್ಯಾಂಡ್ ಗ್ರೆನೇಡ್‌, ಡಿಟೋನೇಟರ್‌, ಆರ್‌ಡಿಎಕ್ಸ್‌, 5 ಪಿಸ್ತೂಲ್‌, 6 ಮ್ಯಾಗಜಿನ್‌, 44 ಜೀವಂತ ಗುಂಡುಗಳು, 1 ವೈರ್‌ಲೆಸ್‌ ಮತ್ತು 3 ವಾಹನ ವಶಪಡಿಸಿಕೊಳ್ಳಲಾಗಿದೆ