ರಷ್ಯಾ ಅಧ್ಯಕ್ಷರಾಗಿ ಪುಟಿನ್‌ 5ನೇ ಬಾರಿಗೆ ಪುನರಾಯ್ಕೆ

| Published : Mar 19 2024, 12:52 AM IST / Updated: Mar 19 2024, 11:18 AM IST

ಸಾರಾಂಶ

ವ್ಲಾಡಿಮಿರ್‌ ಪುಟಿನ್‌ ಬರೋಬ್ಬರಿ 7.6 ಕೋಟಿ (ಶೇ.87.29) ಮತಗಳನ್ನು ಪಡೆಯುವ ಮೂಲಕ ಐದನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮಾಸ್ಕೊ: ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆದ ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಬರೋಬ್ಬರಿ 7.6 ಕೋಟಿ (ಶೇ.87.29) ಮತಗಳನ್ನು ಪಡೆಯುವ ಮೂಲಕ ಐದನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

1999ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾದ ಪುಟಿನ್‌ ಇದುವರೆಗೆ ಅಧ್ಯಕ್ಷ ಇಲ್ಲವೇ ಪ್ರಧಾನಿಯಾಗಿ ಸತತ ಅಧಿಕಾರ ನಡೆಸಿದ್ದಾರೆ. ಈ ಬಾರಿ ಗೆಲ್ಲುವುದರೊಂದಿಗೆ ಅವರ ಅಧಿಕಾರಾವಧಿ ಮತ್ತೆ 2030ರವರೆಗೆ ವಿಸ್ತರಣೆಗೊಂಡಿದೆ. 

ಇದರೊಂದಿಗೆ ಅವರು 30 ವರ್ಷಗಳ ಕಾಲ ದೇಶವನ್ನು ಆಳಿದಂತೆ ಆಗಲಿದೆ. ಈ ಮೂಲಕ ಅವರು ಸುದೀರ್ಘ ಅವಧಿಗೆ ದೇಶವನ್ನು ಆಳಿದ ಸ್ಟಾಲಿನ್‌ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.