ಸಾರಾಂಶ
ಮಾಸ್ಕೋ: ಉಕ್ರೇನ್ ಜೊತೆಗಿನ ಯುದ್ಧಕ್ಕೆ 30 ದಿನಗಳ ಕದನವಿರಾಮವನ್ನು ಪ್ರಸ್ತಾಪಿಸಿರುವ ಅಮೆರಿಕದ ನಿಲುವಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಮ್ಮತಿ ಸೂಚಿಸಿದ್ದಾರೆ. ರಷ್ಯಾಗೆ ಅಮೆರಿಕದ ನಿಲುವಿನ ಬಗ್ಗೆ ಒಪ್ಪಿಗೆ ಇದೆ ಎಂದು ಪುಟಿನ್ ಖುದ್ದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುಟಿನ್, ಅಮೆರಿಕ ಪ್ರಸ್ತಾಪಿಸಿರುವ ಕದನವಿರಾಮವನ್ನು ಒಪ್ಪುತ್ತೇವೆ. ಆದರೆ ಈ ಒಪ್ಪಂದದ ಕುರಿತು ಅಮೆರಿಕದ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಬೇಕಿದೆ ಎಂದಿದ್ದಾರೆ.
ಇದೇ ವೇಳೆ ಶಾಂತಿ ಮಾತುಕತೆಗೆ ಶ್ರಮಿಸಿದ್ದಕ್ಕಾಗಿ ಅಧ್ಯಕ್ಷ ಪುಟಿನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿ, ಹಲವು ದೇಶಗಳಿಗೆ ಧನ್ಯವಾದ ಅರ್ಪಿಸಿದರು.
ಪಾರ್ಕಿಂಗ್ ವಿಚಾರಕ್ಕೆ ಜಗಳ: ವಿಜ್ಞಾನಿ ಮೇಲೆ ಹಲ್ಲೆ, ದಾರುಣ ಸಾವು
ಚಂಡೀಗಢ: ಪಾರ್ಕಿಂಗ್ ವಿಚಾರಕ್ಕೆ ನೆರಮನೆಯವರೊಂದಿಗಿನ ಮಾತಿನ ಚಕಮಕಿ ತಾರಕಕ್ಕೇರಿ ಹಲ್ಲೆಗೊಳಗಾಗಿದ್ದ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್‌ಇಆರ್)ಯ ಯುವ ವಿಜ್ಞಾನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಛತ್ತೀಸಗಢದ ಮೊಹಾಲಿಯಲ್ಲಿ ನಡೆದಿದೆ.
ಅಭಿಷೇಕ್ ಸ್ವರ್ಣಾಕರ್ ಮೃತ ವಿಜ್ಞಾನಿ. ಜಾರ್ಖಂಡ್ ಮೂಲದವರಾಗಿದ್ದ ಸ್ವರ್ಣಾಕರ್ ಐಐಎಸ್‌ಇಆರ್‌ನಲ್ಲಿ ಸಂಶೋಧಕರಾಗಿದ್ದರು. ಮೊಹಾಲಿಯಲ್ಲಿ ತಮ್ಮ ಕುಟುಂಬದ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಂಗಳವಾರ ರಾತ್ರಿ ಬೈಕ್ ಪಾರ್ಕಿಂಗ್ ವಿಚಾರಕ್ಕೆ ಪಕ್ಕದ ಮನೆಯ ಮೊಂಟಿ ಎಂಬಾತನ ಜೊತೆ ಪ್ರಾರಂಭವಾದ ಜಗಳ ತಾರಕಕ್ಕೇರಿತ್ತು. ಆ ಬಳಿಕ ಮೊಂಟಿ, ಸ್ವರ್ಣಾಕರ್‌ರನ್ನು ತಳ್ಳಿದ್ದು, ಅವರು ರಸ್ತೆಗೆ ಬಿದ್ದಿದ್ದಾರೆ. ಆ ಬಳಿಕ ಆತ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಸ್ಥಳೀಯರು ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು.