ಹಿಂಡನ್‌ಬರ್ಗ್‌ನ ಹೊಸ ಸಂಶೋಧನಾ ವರದಿ ಹಾಗೂ ಸೆಬಿ ಅಧ್ಯಕ್ಷೆ ಮಾಧವಿ ಬುಚ್‌ ಅವರ ಮೇಲಿನ ಆರೋಪವನ್ನು ಅನುಮೋದಿಸಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ‘ಅತ್ಯಂತ ಅಪಾಯಕಾರಿ ವ್ಯಕ್ತಿ’ ಎಂದು ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಕಿಡಿಕಾರಿದ್ದಾರೆ.

ಮಂಡಿ (ಹಿಮಾಚಲ): ಹಿಂಡನ್‌ಬರ್ಗ್‌ನ ಹೊಸ ಸಂಶೋಧನಾ ವರದಿ ಹಾಗೂ ಸೆಬಿ ಅಧ್ಯಕ್ಷೆ ಮಾಧವಿ ಬುಚ್‌ ಅವರ ಮೇಲಿನ ಆರೋಪವನ್ನು ಅನುಮೋದಿಸಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ‘ಅತ್ಯಂತ ಅಪಾಯಕಾರಿ ವ್ಯಕ್ತಿ’ ಎಂದು ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಕಿಡಿಕಾರಿದ್ದಾರೆ.

ಸೋಮವಾರ ಟ್ವೀಟ್‌ ಮಾಡಿರುವ ಅವರು, ‘ಆತನೊಬ್ಬ ಕಹಿ, ವಿಷಪೂರಿತ ಹಾಗೂ ವಿನಾಶಕಾರಿ ವ್ಯಕ್ತಿ. ಪ್ರಧಾನಿ ಆಗಲು ಸಾಧ್ಯವಾಗದಿದ್ದರೆ ರಾಷ್ಟ್ರವನ್ನು ನಾಶಪಡಿಸಲು ಮುಂದಾಗುತ್ತಾರೆ. ಇದು ಅವರ ಅಜೆಂಡಾ. ಭಾನುವಾರ ರಾತ್ರಿ ರಾಹುಲ್‌ ಗಾಂಧಿ ಹಿಂಡನ್‌ಬರ್ಗ್‌ ವರದಿಯನ್ನು ಅನುಮೋದಿಸಿದ್ದರು. ಅದು ಈಗ ಠುಸ್‌ ಪಟಾಕಿಯಾಗಿದೆ’ ಎಂದಿದ್ದಾರೆ.

‘ನಿಮ್ಮ ಜೀವನದುದ್ದಕ್ಕೂ ವಿಪಕ್ಷ ನಾಯಕರಾಗಿ ಕೂರಲು ಸಿದ್ಧವಾಗಿರಿ’ ಎಂದೂ ರಾಹುಲ್‌ಗೆ ಅವರು ಚಾಟಿ ಬೀಸಿದ್ದಾರೆ.