ಅಮೇಠಿಯಿಂದ ರಾಹುಲ್‌ ಕಣಕ್ಕೆ?

| Published : May 03 2024, 01:07 AM IST / Updated: May 03 2024, 05:36 AM IST

Rahul Gandhi

ಸಾರಾಂಶ

ರಾಯ್‌ಬರೇಲಿಯಿಂದ ಪ್ರಿಯಾಂಕಾ ಬದಲು ಆಶಿಶ್‌ ಕೌಲ್‌ ಸ್ಪರ್ಧಿಸುವ ಸಂಭವವಿದ್ದು, ಇಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ.

ನವದೆಹಲಿ: ಗಾಂಧೀ ಕುಟುಂಬದ ಪಾಲಿನ ಪ್ರತಿಷ್ಠಿತ ಕ್ಷೇತ್ರಗಳಾದ ಉತ್ತರಪ್ರದೇಶದ ಅಮೇಠಿಯಿಂದ ರಾಹುಲ್‌ ಗಾಂಧಿ ಮತ್ತು ರಾಯ್‌ಬರೇಲಿಯಿಂದ ಗಾಂಧಿ ಕುಟುಂಬಕ್ಕೆ ಸೇರಿದ ಆಶಿಶ್‌ ಕೌಲ್‌ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿದೆ ಎನ್ನಲಾಗಿದೆ.

 ಈ ಮೂಲಕ ರಾಯ್‌ಬರೇಲಿಯಿಂದ ಪ್ರಿಯಾಂಕಾ ಕಣಕ್ಕೆ ಇಳಿಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಉಭಯ ನಾಯಕರು ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ. ಅಮೇಠಿಯಲ್ಲಿ ಭರ್ಜರಿ ರೋಡ್‌ಶೋ ಮೂಲಕ ತೆರಳಿ ರಾಹುಲ್‌ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂಬಂಧ ಎಲ್ಲಾ ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ.

ಈಗಾಗಲೇ ಕೇರಳದ ವಯನಾಡು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ರಾಹುಲ್‌ ಗಾಂಧಿ, ಎರಡನೇ ಕ್ಷೇತ್ರವಾಗಿ ಅಮೇಠಿಯಿಂದಲೂ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ. 2019ರಲ್ಲಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಆಶಿಶ್‌ ಕೌಲ್‌ ಕಣಕ್ಕೆ:ರಾಯ್‌ಬರೇಲಿಯಿಂದ ಪ್ರಿಯಾಂಕಾ ಕಣಕ್ಕೆ ಇಳಿಯುವ ನಿರೀಕ್ಷೆ ಹುಸಿಯಾಗಿದ್ದು ಅವರ ಬದಲಿಗೆ ಗಾಂಧಿ ಕುಟುಂಬಕ್ಕೆ ಸೇರಿದ ಶೀಲಾ ಕೌಲ್‌ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಆಶಿಶ್‌ ಕೌಲ್‌, ಇಂದಿರಾ ಗಾಂಧಿ ಅವರ ಮಾವ ಕೈಲಾಸ್‌ನಾಥ್‌ ಕೌಲ್‌ ಅವರ ಮೊಮ್ಮಗ