ಭೋಪಾಲ್‌: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಪಕ್ಷದ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದ ಕಾರಣ 10 ಪುಷಪ್‌ ಶಿಕ್ಷೆ ಎದುರಿಸಿದ ಘಟನೆ ಭಾನುವಾರ ನಡೆದಿದೆ.

ರಾಹುಲ್‌ ಗಾಂಧಿ ಅವರು ಕೊಂಚ ಸಮಯ ತಡವಾಗಿ ಆಗಮಿಸಿದರು

ಮಧ್ಯ ಪ್ರದೇಶದಲ್ಲಿ ಪಕ್ಷದ ತರಬೇತಿ ಕಾರ್ಯಕ್ರಮವೊಂದು ಏರ್ಪಟ್ಟಿತ್ತು. ಇದಕ್ಕೆ ರಾಹುಲ್‌ ಗಾಂಧಿ ಅವರು ಕೊಂಚ ಸಮಯ ತಡವಾಗಿ ಆಗಮಿಸಿದರು. ಈ ವೇಳೆ ಕಾರ್ಯಕ್ರಮದ ಆಯೋಜಿಸಿದ್ದ ಪಕ್ಷದ ನಾಯಕರು, ನಿಯಮ ಮೀರಿದವರಿಗೆ ನಾವು ಶಿಕ್ಷೆ ನೀಡುವ ಕಾನೂನು ರೂಪಿಸಿದ್ದೇವೆ ಎಂಬುದನ್ನು ರಾಹುಲ್‌ ಗಮನಕ್ಕೆ ತಂದರು. 

‘10 ಪುಷ್‌ಅಪ್‌ ಹೊಡೆಯಬೇಕು’ ಎಂದ ಮುಖ್ಯಸ್ಥರು

ಈ ವೇಳೆ ಶಿಕ್ಷೆ ಏನೆಂದು ಕೇಳಿದ ರಾಹುಲ್‌ ಅವರಿಗೆ ‘10 ಪುಷ್‌ಅಪ್‌ ಹೊಡೆಯಬೇಕು’ ಎಂದು ಮುಖ್ಯಸ್ಥರು ಹೇಳಿದರು. ಬಳಿಕ ಕೊಂಚ ಸಮಯವನ್ನು ವ್ಯರ್ಥ ಮಾಡದ ರಾಹುಲ್‌, ಕೂಡಲೇ ಪುಷ್‌ ಅಪ್‌ ಹೊಡೆದು ಎಲ್ಲರ ಮೆಚ್ಚುಗೆ ಗಳಿಸಿದರು. ಇವರೊಂದಿಗೆ ಜಿಲ್ಲಾಧ್ಯಕ್ಷರೂ ಸಹ ಪುಷ್‌ ಅಪ್‌ ಹೊಡೆಯಬೇಕಾಯಿತು.