ಸಾರಾಂಶ
ಬೇಗುಸರೈ (ಬಿಹಾರ) : ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಬಿಹಾರಕ್ಕೆ ಪ್ರಚಾರಕ್ಕೆಂದು ಆಗಮಿಸಿದಾಗ ಕೆರೆಗೆ ಹಾರಿ, ಮೀನು ಹಿಡಿದು, ಅಲ್ಲಿನ ಜನರೊಂದಿಗೆ ಈಜಾಡಿ ಎಲ್ಲರನ್ನೂ ಚಕಿತಗೊಳಿಸಿದ ಪ್ರಸಂಗ ನಡೆಯಿತು.
ಬೇಗುಸರೈ ಜಿಲ್ಲೆಯ ಕೆರೆಯೊಂದರ ಬಳಿ ಮೀನು ಹಿಡಿದ ರಾಹುಲ್
ಪ್ರಚಾರದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಮಾರ್ಗಮಧ್ಯೆ ಬೇಗುಸರೈ ಜಿಲ್ಲೆಯ ಕೆರೆಯೊಂದರ ಬಳಿ ಕಾರು ಇಳಿದರು. ದೋಣಿಯಲ್ಲಿ ಹತ್ತಿ ಕೆರೆ ಮಧ್ಯದವರೆಗೆ ತೆರಳಿದರು. ಮೊದಲು ರಾಹುಲ್ ಜತೆಗಿದ್ದ ಬೆಸ್ತ (ನಿಷಾದ್) ಸಮುದಾಯಕ್ಕೆ ಸೇರಿದ ಬಿಹಾರ ಮಾಜಿ ಸಚಿವ ಹಾಗೂ ವಿಪಕ್ಷ ಕೂಟದ ಡಿಸಿಎಂ ಅಭ್ಯರ್ಥಿ ಮುಕೇಶ್ ಸಾಹ್ನಿ ತಮ್ಮ ಶರ್ಟ್ ಪ್ಯಾಂಟ್ ತೆಗೆದು, ನೀರಿಗೆ ಜಿಗಿದರು. ನಂತ ರಾಹುಲ್ ಅವರೂ ತಮ್ಮ ಬಿಳಿ ಟೀಶರ್ಟ್ ಮತ್ತು ಕಾರ್ಗೋ ಪ್ಯಾಂಟ್ ದಿರಿಸನಲ್ಲೇ ನೀರಿಗೆ ಜಿಗಿದರು.
ಬಲೆ ಮೂಲಕ ಮೀನು ಹಿಡಿದರು
ಬಳಿಕ ರಾಹುಲ್ ಅಲ್ಲಿದ್ದ ಬೆಸ್ತರೊಂದಿಗೆ ಬಲೆ ಮೂಲಕ ಮೀನು ಹಿಡಿದರು. ನಂತರ ಕ್ಷಣ ಹೊತ್ತು ಈಜಾಡಿ, ನೀರಿನಲ್ಲಿದ್ದವರ ಜೊತೆಗೆ ಫೋಟೋಗಳನ್ನು ತೆಗೆಸಿಕೊಂಡು, ಮುಂದೆ ಸಾಗಿದರು. ಈ ವೇಳೆ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಕೂಡ ಇದ್ದರು.
ಬೇಗುಸರೈನಲ್ಲಿ ನಿಷಾದ್ (ಬೆಸ್ತ) ಸಮುದಾಯದ ಮತಗಳು ತುಂಬಾ ಇವೆ ಎನ್ನಲಾಗಿದ್ದು, ಅವುಗಳಿಗೆ ಗಾಳ ಹಾಕಲು ರಾಹುಲ್ ಹಾಗೂ ಸಾಹ್ನಿ ನೀರಿಗೆ ಇಳಿದು ಬೆಸ್ತ ಸಮುದಾಯದ ಮತದಾರರ ಓಲೈಸಿದ್ದಾರೆರೆ ಎನ್ನಲಾಗಿದೆ.
)
;Resize=(128,128))
;Resize=(128,128))