ಈ ಸಲ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಹಾಗೂ ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ಅವರಿಗೆ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಲು ಅವಕಾಶ ಸಿಗಲೇ ಇಲ್ಲ!

ನವದೆಹಲಿ: ಈ ಸಲ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಹಾಗೂ ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ಅವರಿಗೆ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಲು ಅವಕಾಶ ಸಿಗಲೇ ಇಲ್ಲ! 

ಏಕೆಂದರೆ ಇದು ಆಪ್ ಹಾಗೂ ಕಾಂಗ್ರೆಸ್‌ ನಡುವೆ ದಿಲ್ಲಿಯಲ್ಲಿ ಆದ ಮೈತ್ರಿಯ ಫಲ. ರಾಹುಲ್‌ ಹಾಗೂ ಸೋನಿಯಾ ಅವರ ಮತಗಟ್ಟೆ ಇರುವ ನವದೆಹಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌-ಆಪ್‌ ಮೈತ್ರಿಕೂಟದಿಂದ ಆಪ್‌ ಅಭ್ಯರ್ಥಿ ಸ್ಪರ್ಧಿಸಿದ್ದರೆ, ಕೇಜ್ರಿವಾಲ್‌ ಮತ ಹಾಕಿದ ಮತಗಟ್ಟೆ ಇರುವ ಚಾಂದನಿ ಚೌಕ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಿಂತಿದ್ದರು. 

ಹೀಗಾಗಿ ಮೈತ್ರಿ ಧರ್ಮಕ್ಕೆ ಅನುಸಾರ ಇಬ್ಬರೂ ಮತ ಹಾಕಿದರು.