ಸಾರಾಂಶ
ಮಥುರೆಯಲ್ಲಿರುವ ಶಾಹಿ ಮಸೀದಿ ಜಾಗದಲ್ಲಿ ಕೃಷ್ಣ ಮಂದಿರ ಉದ್ಘಾಟನೆ ಆಗುವವರೆಗೆ ತಾನು ದಿನಕ್ಕೆ ಒಂದು ಬಾರಿ ಆಹಾರ ಸೇವಿಸುತ್ತೇನೆ ಎಂದು ರಾಜಸ್ಥಾನ ಸಚಿವ ಮದನ್ ದಿಲಾವರ್ ತಿಳಿಸಿದ್ದಾರೆ.
ಕೋಟಾ: ಮಥುರೆಯಲ್ಲಿ ಕೃಷ್ಣ ಮಂದಿರ ನಿರ್ಮಾಣವಾಗುವ ವರೆಗೆ ಕೇವಲ ಒಂದು ಹೊತ್ತು ಊಟ ಮಾಡುವುದಾಗಿ ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಪ್ರತಿಜ್ಞೆ ಮಾಡಿದ್ದಾರೆ.
ಕೋಟಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವವರೆಗೆ ನಾನು ಯಾವುದೇ ಹೂವಿನ ಹಾರ ಧರಿಸಿವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ.
ಈಗ ಅದು ನೆರವೇರಿದೆ. ಇನ್ನು ಮಥುರೆಯಲ್ಲಿ ಭವ್ಯ ಶ್ರೀಕೃಷ್ಣ ಮಂದಿರ ನಿರ್ಮಾಣವಾಗುವವರೆಗೆ ನಾನು ಕೇವಲ ಒಂದು ಹೊತ್ತು ಆಹಾರ ಸೇವಿಸುತ್ತೇನೆ’ ಎಂದು ಶಪಥ ಮಾಡಿದರು.
ಇವರು ಜಮ್ಮು ಕಾಶ್ಮೀರದ 370ನೇ ವಿಧಿ ರದ್ದಾಗುವವರೆಗೆ ಹಾಸಿಗೆ ಮೇಲೆ ಮಲಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.