ಟೆಸ್ಲಾ ಕಾರು ಕೂಡಾ ಹ್ಯಾಕ್: ಮಸ್ಕ್‌ಗೆ ರಾಜೀವ್ ತಿರುಗೇಟು

| Published : Jun 18 2024, 12:46 AM IST / Updated: Jun 18 2024, 06:18 AM IST

ಟೆಸ್ಲಾ ಕಾರು ಕೂಡಾ ಹ್ಯಾಕ್: ಮಸ್ಕ್‌ಗೆ ರಾಜೀವ್ ತಿರುಗೇಟು
Share this Article
  • FB
  • TW
  • Linkdin
  • Email

ಸಾರಾಂಶ

ಇವಿಎಂ ಕುರಿತ ವ್ಯಂಗ್ಯಕ್ಕೆ ಬಿಜೆಪಿ ಮುಖಂಡ ರಾಜೀವ್‌ ಚಂದ್ರಶೇಖರ್‌ ಟೆಸ್ಲಾ ಮಾಲೀಕ ಎಲಾನ್‌ ಮಸ್ಕ್‌ಗೆ ಟಾಂಗ್‌ ನೀಡಿದ್ದಾರೆ.

ನವದೆಹಲಿ: ‘ಯಾವುದನ್ನೂ ಬೇಕಾದರೂ ಹ್ಯಾಕ್‌ ಮಾಡಬಹುದು’ ಎನ್ನುವ ಮೂಲಕ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (ಇವಿಎಂ)ಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಟೆಸ್ಲಾ ಎಲೆಕ್ಟ್ರಿಕ್‌ ಕಾರು ಕಂಪನಿ ಮಾಲೀಕ ಎಲಾನ್ ಮಸ್ಕ್‌ಗೆ ತಿರುಗೇಟು ನೀಡಿರುವ ಕೇಂದ್ರದ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌, ‘ಹಾಗಿದ್ದರೆ ಟೆಸ್ಲಾ ಕಾರುಗಳು ಕೂಡಾ ಹ್ಯಾಕ್‌ಗೆ ಹೊರತಾಗಿಲ್ಲ’ ಎಂದಿದ್ದಾರೆ.

ಮಸ್ಕ್‌ ಜೊತೆಗೆ ತಾವು ಭಾನುವಾರ ನಡೆಸಿದ ಟ್ವೀಟರ್‌ ಜಟಾಪಟಿಯ ಮುಂದುವರೆದ ಭಾಗವಾಗಿ ಸೋಮವಾರ ಮತ್ತೆ ಪ್ರತಿಕ್ರಿಯೆ ನೀಡಿರುವ ರಾಜೀವ್‌, ‘ನಾನು ಎಲಾನ್‌ ಮಸ್ಕ್‌ ಅಲ್ಲ. ಆದರೆ ತಂತ್ರಜ್ಞಾನದ ಕುರಿತು ಒಂದಷ್ಟು ಜ್ಞಾನ ಹೊಂದಿದ್ದೇನೆ. ಅದರನ್ವಯ ವಿಶ್ವದಲ್ಲಿ ಯಾವುದೇ ಡಿಜಿಟಲ್‌ ಉತ್ಪನ್ನ ಕೂಡಾ ಪೂರ್ಣ ಸುಭದ್ರ ಎಂದು ಹೇಳಲಾಗದು. ಅದರರ್ಥ ನೀವು ಟೆಸ್ಲಾ ಕಾರನ್ನು ಕೂಡಾ ಹ್ಯಾಕ್‌ ಮಾಡಬಹುದು’ ಎಂದು ಹೇಳಿದ್ದಾರೆ.

ಟೆಸ್ಲಾ ಚಾಲಕರಹಿತ ಕಾರನ್ನು ಹೊಂದಿದ್ದು, ಅದು ಸ್ವಯಂ ಚಾಲನೆ ಸಾಮರ್ಥ್ಯ ಹೊಂದಿದೆ. ಅದನ್ನು ಉದ್ದೇಶಿಸಿ ರಾಜೀವ್‌ ಈ ಮಾತುಗಳನ್ನು ಆಡಿದ್ದಾರೆ.ಅಲ್ಲದೆ, ‘ಭಾರತದ ಇವಿಎಂ ಹ್ಯಾಕ್‌ಗೆ ತುತ್ತಾಗುವ ಸಾಧ್ಯತೆ ಇಲ್ಲ. ಏಕೆಂದರೆ ಅದು ಅಷ್ಟಾಗಿ ಬುದ್ಧಿಮತ್ತೆ ಹೊಂದಿರದ ಉಪಕರಣ. ಅದು ಸಂಖ್ಯೆಯನ್ನು ಎಣಿಸುವ ಮತ್ತು ಅದರ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಮಾತ್ರ ಹೊಂದಿದೆ. ಎಲ್ಲಾ ಇವಿಎಂಗಳೂ ಹ್ಯಾಕ್‌ಗೆ ತುತ್ತಾಗುವ ಸಾಧ್ಯತೆ ಇದ್ದೇ ಇದೆ ಎಂಬ ಮಸ್ಕ್‌ ಹೇಳಿಕೆ ತಪ್ಪಾದ ಮಾಹಿತಿ. ಈ ಯಂತ್ರಗಳು ಮಸ್ಕ್‌ ಹೇಳಿದ ರೀತಿಯ ಅತ್ಯಾಧುನಿಕ ಮಷಿನ್‌ಗಳಲ್ಲ’ ಎಂದಿದ್ದಾರೆ.