ಪಾಕಿಸ್ತಾನವು ಕೋಲ್ಕತಾ ಮೇಲೆ ದಾಳಿ ನಡೆಸಲು ಯತ್ನಿಸಿದರೆ ಪಾಕಿಸ್ತಾನವನ್ನು ತುಂಡು ತುಂಡು ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಎಚ್ಚರಿಸಿದ್ದಾರೆ.
ಪಿಟಿಐ ಬ್ಯಾರಕ್‌ಪುರ (ಬಂಗಾಳ)
ಪಾಕಿಸ್ತಾನವು ಕೋಲ್ಕತಾ ಮೇಲೆ ದಾಳಿ ನಡೆಸಲು ಯತ್ನಿಸಿದರೆ ಪಾಕಿಸ್ತಾನವನ್ನು ತುಂಡು ತುಂಡು ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಎಚ್ಚರಿಸಿದ್ದಾರೆ.‘ಭಾರತ ನಮ್ಮ ಮೇಲೆ ದಾಳಿ ಮಾಡಿದರೆ ಕೋಲ್ಕತಾ ಮೇಲೆರಗುತ್ತೇವೆ’ ಎಂದಿದ್ದ ಪಾಕ್ ಸಚಿವ ಖ್ವಾಜಾ ಆಸಿಫ್ ಹೇಳಿಕೆಗೆ ಮಂಗಳವಾರ ಬಿಜೆಪಿ ಸಭೆಯಲ್ಲಿ ತಿರುಗೇಟು ನೀಡಿದ ರಾಜನಾಥ್, ‘ಪಾಕಿಸ್ತಾನದ ರಕ್ಷಣಾ ಸಚಿವರು ಇಂತಹ ಪ್ರಚೋದನಕಾರಿ ಹೇಳಿಕೆ ನೀಡಬಾರದಿತ್ತು. 55 ವರ್ಷಗಳ ಹಿಂದೆ, ಪಾಕಿಸ್ತಾನ 2 ಭಾಗಗಳಾಗಿ ವಿಭಜನೆ ಆಗಿತ್ತು. ಈಗ ಅವರು ಬಂಗಾಳದ ಮೇಲೆ ಕಣ್ಣಿಡಲು ಪ್ರಯತ್ನಿಸಿದರೆ, ಪಾಕ್ ಎಷ್ಟು ಭಾಗಗಳಾಗಿ ವಿಭಜನೆಯಾಗುತ್ತದೆ ಎಂದು ದೇವರಿಗೆ ಮಾತ್ರ ತಿಳಿದಿದೆ’ ಎಂದರು.