ರಾಜ್ಯಸಭೆ: ಇಂಡಿಯಾ ಕೂಟಕ್ಕೆ ಭಾರಿ ಹಿನ್ನಡೆ

| Published : Feb 28 2024, 02:31 AM IST / Updated: Feb 28 2024, 11:39 AM IST

ಸಾರಾಂಶ

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿಮಾಚಲದ ಸೋಲು ಮತ್ತು ಸಮಾಜವಾದಿ ಪಕ್ಷಕ್ಕೆ ಉತ್ತರ ಪ್ರದೇಶದ 10ನೇ ಸ್ಥಾನದ ನಿರೀಕ್ಷಿತ ಸೋಲು ಇಂಡಿಯಾ ಕೂಟಕ್ಕೆ ಭಾರಿ ಹಿನ್ನಡೆ ಉಂಟು ಮಾಡಿವೆ.

ನವದೆಹಲಿ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿಮಾಚಲದ ಸೋಲು ಮತ್ತು ಸಮಾಜವಾದಿ ಪಕ್ಷಕ್ಕೆ ಉತ್ತರ ಪ್ರದೇಶದ 10ನೇ ಸ್ಥಾನದ ನಿರೀಕ್ಷಿತ ಸೋಲು ಇಂಡಿಯಾ ಕೂಟಕ್ಕೆ ಭಾರಿ ಹಿನ್ನಡೆ ಉಂಟು ಮಾಡಿವೆ. 

ಇದು ಮುಂದಿನ ಲೋಕಸಭೆ ಚುನಾವಣೆ ಮೇಲೂ ಪರಿಣಾಮ ಬೀರಲಿದೆ.ಏಕೆಂದರೆ ಎಸ್ಪಿಯ 7 ಹಾಗೂ ಕಾಂಗ್ರೆಸ್‌ ಮತ್ತು ಕಾಂಗ್ರೆಸ್‌ ಬೆಂಬಲಿತ 9 ಶಾಸಕರು ಕ್ರಮವಾಗಿ ಉತ್ತರ ಪ್ರದೇಶ ಹಾಗೂ ಹಿಮಾಚಲದಲ್ಲಿ ಅಡ್ಡಮತದಾನ ಮಾಡಿದ್ದಾರೆ. 

ಹೀಗಾಗಿ ತಮ್ಮ ಶಾಸಕರ ಹಿಡಿದು ಇಟ್ಟುಕೊಳ್ಳಲಾಗದೆ ಕಾಂಗ್ರೆಸ್‌, ಎಸ್ಪಿ ಮುಖಭಂಗ ಅನುಭವಿಸಿವೆ.

ಆದೆರೆ ನಿರಾಶಾದಾಯಕ ದಿನದಲ್ಲಿ ಪಕ್ಷಕ್ಕೆ ನೆಮ್ಮದಿಯ ಏಕೈಕ ಮೂಲವೆಂದರೆ ಕರ್ನಾಟಕದಲ್ಲಿ ಅದರ ನಿರೀಕ್ಷಿತ ಮೂರು ರಾಜ್ಯಸಭಾ ಸ್ಥಾನಗಳನ್ನು ಪಡೆದುಕೊಂಡಿರುವುದು ಹಾಗೂ ಅಲ್ಲಿ ಬಿಜೆಪಿ ಶಾಸಕರೊಬ್ಬರು ಕಾಂಗ್ರೆಸ್ ಪರವಾಗಿ ಅಡ್ಡ ಮತದಾನ ಮಾಡಿರುವುದು.