ರಾವಣ ಮಂದಿರದಲ್ಲಿ ಇದೇ ಮೊದಲ ಬಾರಿಗೆ ರಾಮ ವಿಗ್ರಹ ಸ್ಥಾಪನೆ

| Published : Jan 23 2024, 01:45 AM IST / Updated: Jan 23 2024, 12:15 PM IST

ರಾವಣ ಮಂದಿರದಲ್ಲಿ ಇದೇ ಮೊದಲ ಬಾರಿಗೆ ರಾಮ ವಿಗ್ರಹ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಪ್ರದೇಶದ ಬಿಸ್ರಾಖ್‌ ಗ್ರಾಮದಲ್ಲಿ ರಾವಣನಿಗೆ ಪೂಜೆಗೊಳ್ಳುವ ಶಿವ ಮಂದಿರದಲ್ಲಿ ರಾಮನನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ಪೂಜೆ ನಡೆಸಲಾಗುತ್ತದೆ.

ನೊಯ್ಡಾ: ಸೋಮವಾರ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಸಮಾರಂಭ ನಡೆಯುತ್ತಿದ್ದಂತೆ, ಉತ್ತರ ಪ್ರದೇಶದ ನೊಯ್ಡಾ ಬಳಿಯ ಬಿಸ್ರಾಖ್ ಗ್ರಾಮದಲ್ಲಿರುವ ಐತಿಹಾಸಿಕ ರಾವಣ ಮಂದಿರದ ಒಳಗೆ ಇದೇ ಮೊದಲ ಬಾರಿಗೆ ರಾಮನ ವಿಗ್ರಹವನ್ನು ಒಯ್ಯಲಾಗಿದೆ.

ಸಂಪೂರ್ಣ ಧಾರ್ಮಿಕ ವಿಧಾನಗಳಿಂದ ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.

ಅಯೋಧ್ಯೆಯಿಂದ 650 ಕಿ.ಮೀ ದೂರದಲ್ಲಿರುವ ಬಿಸ್ರಾಖ್‌ನಲ್ಲಿರುವುದು ಶಿವನ ದೇವಸ್ಥಾನವಾಗಿದೆ.

ಆದರೆ ಪುರಾಣಗಳ ಪ್ರಕಾರ ಇದೇ ಸ್ಥಳದಲ್ಲಿ ರಾವಣ ಜನಿಸಿದ್ದ ಎಂದು ನಂಬಲಾಗಿದ್ದು, ಇಲ್ಲಿ ರಾವಣನನ್ನು ಪೂಜಿಸಲಾಗುತ್ತದೆ.

ಇದೀಗ ಆ ದೇವಸ್ಥಾನದಲ್ಲಿ ರಾಮನ ಸ್ಥಾಪನೆಯಾಗಿದೆ.