5 ವರ್ಷದಲ್ಲಿ ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ ಸರ್ಕಾರಕ್ಕೆ ₹ 400 ಕೋಟಿ ತೆರಿಗೆ ಪಾವತಿ

| N/A | Published : Mar 17 2025, 12:31 AM IST / Updated: Mar 17 2025, 06:23 AM IST

ಸಾರಾಂಶ

ಇಲ್ಲಿನ ರಾಮ ಮಂದಿರಕ್ಕೆ ಭಕ್ತರ ಆಗಮನ ಹೆಚ್ಚುತ್ತಿದ್ದು, ಈ ನಡುವೆ ಕಳೆದ 5 ವರ್ಷದಲ್ಲಿ ಮಂದಿರ ಟ್ರಸ್ಟ್‌ 400 ಕೋಟಿ ರು. ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ.

ಅಯೋಧ್ಯೆ: ಇಲ್ಲಿನ ರಾಮ ಮಂದಿರಕ್ಕೆ ಭಕ್ತರ ಆಗಮನ ಹೆಚ್ಚುತ್ತಿದ್ದು, ಈ ನಡುವೆ ಕಳೆದ 5 ವರ್ಷದಲ್ಲಿ ಮಂದಿರ ಟ್ರಸ್ಟ್‌ 400 ಕೋಟಿ ರು. ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ.

2020ರ ಫೆ.5ರಿಂದ 2025ರ ಫೆ.5ವರೆಗೆ 270 ಕೋಟಿ ರು.ಗಳನ್ನು ಜಿಎಸ್‌ಟಿ ರೂಪದಲ್ಲಿ, ಮಿಕ್ಕ 130 ಕೋಟಿ ರು.ಗಳನ್ನು ಇತರೆ ತೆರಿಗೆ ವರ್ಗಗಳ ಅಡಿ ಪಾವತಿಸಲಾಗಿದೆ. ದೇಗುಲದ ಲೆಕ್ಕಪತ್ರಗಳನ್ನು ಮಹಾಲೇಖಪಾಲಕರ ಅಧಿಕಾರಿಗಳು ಆಡಿಟ್‌ ಮಾಡುತ್ತಾರೆ ಎಂದು ತಿಳಿಸಿದರು.

ಕಳೆದ ವರ್ಷ ಜ.24ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಭಕ್ತರ ಆಗಮನ ಹೆಚ್ಚುತ್ತಲೇ ಇದೆ. ಒಂದು ವರ್ಷದಲ್ಲಿ 16 ಕೋಟಿ ಜನರು ಅಯೋಧ್ಯೆಗೆ ಭೇಟಿ ನೀಡಿದ್ದು, ಮಂದಿರಕ್ಕೆ 5 ಕೋಟಿ ಜನರು ಭೇಟಿ ನೀಡಿದ್ದಾರೆ. ಜ.13ರಿಂದ ಫೆ.26ರವರೆಗೆ ನಡೆದ ಕುಂಭಮೇಳದ ಅವಧಿಯಲ್ಲಿ 1.6 ಕೋಟಿ ಭಕ್ತರು ಭೇಟಿ ನೀಡಿದ್ದಾರೆ.