ಸಾರಾಂಶ
ಕೋಲ್ಕತಾ ರೈಲ್ವೇ ನಿಲ್ದಾಣದಲ್ಲಿ ಹಾಡು ಹಾಡಿ ಫೇಮಸ್ ಆಗಿದ್ದ ರಾಣು ಮಂಡಲ್ ಮತ್ತೆ ಕೋಲ್ಕತ್ತಾಗೆ ಮರಳಿದ್ದಾರೆ. ಮುಂಬೈನಲ್ಲಿ ಅವಕಾಶಗಳು ಕಡಿಮೆಯಾದ ಕಾರಣ ಮತ್ತೆ ಭಿಕ್ಷಾ ವೃತ್ತಿ ಆರಂಭಿಸಿದ್ದಾರೆ. ಈಗ ಜನರಿಗೆ ವಿಚಿತ್ರ ಬೇಡಿಕೆಗಳನ್ನು ಇಡುತ್ತಿದ್ದಾರೆ
ಕೋಲ್ಕತಾ: ಹಿಂದೊಮ್ಮೆ ಕೋಲ್ಕತಾ ರೈಲ್ವೇ ನಿಲ್ದಾಣದಲ್ಲಿ ಹಿಂದಿ ಹಾಡುಗಳನ್ನು ಹಾಡಿ ಭಿಕ್ಷೆ ಬೇಡುತ್ತಿದ್ದ ರಾಣು ಮಂಡಲ್ ವಿಡಿಯೋ ಮೂಲಕ ಫೇಮಸ್ ಆಗಿ ಗಾಯಕ ಹಿಮೇಶ್ ರೇಶಮಿಯಾ ಅವರ ಸಹಾಯದಿಂದ ಮುಂಬೈನಲ್ಲಿ ಪ್ರಸಿದ್ಧ ಗಾಯಕಿ ಆಗಿದ್ದಳು. ಆದರೆ ಮುಂಬೈನಲ್ಲಿ ಅವಕಾಶಗಳು ಏಕಾಏಕಿ ಕುಸಿದ ಕಾರಣ, ಈಗ ಮತ್ತೆ ಕೋಲ್ಕತಾಗೆ ಮರಳಿ ಭಿಕ್ಷಾ ವೃತ್ತಿ ಆರಂಭಿಸಿದ್ದಾಳೆ.
ಈ ಹಿಂದೆ ಕೋಲ್ಕತಾದಲ್ಲಿ ರಾಣು ಮಧುರ ಗೀತೆಗಳನ್ನುಸಂಗೀತ ಪ್ರೇಮಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಕಾರಣ ಆಕೆಯ ಧ್ವನಿಯಿಂದ ಮಂತ್ರಮುಗ್ಧರಾದ ಸಂಗೀತ ನಿರ್ದೇಶಕ ಮತ್ತು ಗಾಯಕ ಹಿಮೇಶ್ ರೇಶಮಿಯಾ, ಆಕೆಯನ್ನು ಬಾಲಿವುಡ್‌ಗೆ ಕರೆತಂದಿದ್ದರು. ಕೋಲ್ಕತಾ ಬಿಟ್ಟು ಮುಂಬೈನಲ್ಲಿ ಬಾಡಿಗೆ ಮನೆ ಮಾಡಿದ ಆಕೆ ಆಗ ಕ್ಷಣಾರ್ಧದಲ್ಲಿ ರಾಣು ಕಂಚಿನ ಕಂಠ, ವಿಚಿತ್ರ ಮೇಕಪ್ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ಆದರೆ ಮುಂಬೈನಲ್ಲಿ ಈಗ ಮನೆ ಬಾಡಿಗೆ ಕಟ್ಟಲಾಗದೇ ಮತ್ತೆ ಕೋಲ್ಕತ್ತಾಗೆ ಮರಳಿದ್ದಾರೆ ಹಾಗೂ ಹೊರವಲಯದಲ್ಲಿರುವ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾಳೆ.
ವಿಚಿತ್ರ ಬೇಡಿಕೆ:
ಈ ನಡುವೆ, ರಾಣುಳ ಸ್ಥಿತಿ ನೋಡಿ ಮನೆಗೆ ಭೇಟಿ ನೀಡುವ ಜನರಿಗೆ ಆಕೆ ವಿಚಿತ್ರವಾದ ಬೇಡಿಕೆಗಳನ್ನು ಇಡುತ್ತಾಳೆ ಸಿಹಿತಿಂಡಿಗಳು, ಬಿಸ್ಕತ್ತುಗಳು ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಕೇಳುತ್ತಾರೆ. ಅವನ್ನು ಕೊಡದಿದ್ದರೆ ಪೊರಕೆಯೊಂದಿಗೆ ಅವನತ್ತ ಓಡುತ್ತಾಳೆ. ಇದರಿಂದ ರಾಣು ಅವರನ್ನು ಭೇಟಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹಲವು ಬಾರಿ ರಾಣು ಊಟ ಮಾಡದೆ ಇಡೀ ದಿನ ಹಸಿವಿನಿಂದ ಇರಬೇಕಾಗುತ್ತದೆ.