ಪನ್ನೂನ್‌ ಹತ್ಯೆ ಯತ್ನದ ಸಂಚಲ್ಲಿ ‘ರಾ’ ಕೈವಾಡ: ಅಮೆರಿಕ ಪತ್ರಿಕೆ

| Published : Apr 30 2024, 02:01 AM IST / Updated: Apr 30 2024, 05:51 AM IST

ಪನ್ನೂನ್‌ ಹತ್ಯೆ ಯತ್ನದ ಸಂಚಲ್ಲಿ ‘ರಾ’ ಕೈವಾಡ: ಅಮೆರಿಕ ಪತ್ರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಹತ್ಯೆ ಸಂಚಿನ ಹಿಂದೆ ಭಾರತದ ವಿದೇಶಿ ಗುಪ್ತಚರ ಸಂಸ್ಥೆ ‘ರಾ’ ಕೈವಾಡವಿತ್ತು ಎಂದು ಅಮೆರಿಕದ ‘ವಾಷಿಂಗ್ಟನ್‌ ಪೋಸ್ಟ್‌’ ವರದಿ ಮಾಡಿದೆ.

ವಾಷಿಂಗ್ಟನ್‌: ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಗುರು ಪತ್ವಂತ್‌ ಸಿಂಗ್‌ ಪನ್ನೂನ್‌ ಹತ್ಯೆ ಸಂಚಿನ ಹಿಂದೆ ಭಾರತದ ವಿದೇಶಿ ಗುಪ್ತಚರ ಸಂಸ್ಥೆ ‘ರಾ’ ಕೈವಾಡವಿತ್ತು ಎಂದು ಅಮೆರಿಕದ ‘ವಾಷಿಂಗ್ಟನ್‌ ಪೋಸ್ಟ್‌’ ವರದಿ ಮಾಡಿದೆ. 

ಜೊತೆಗೆ ಭಾರತದ ‘ರಾ’ ಮುಖ್ಯಸ್ಥರ ಹೆಸರು ಮತ್ತು ಹತ್ಯೆಗೆ ನಿಯೋಜಿತ ‘ರಾ’ ಏಜೆಂಟ್ ಹೆಸರನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದೆ. ಖಲಿಸ್ತಾನಿ ಪರ ಹೋರಾಟಗಾರ ಪನ್ನೂನ್‌ ಹತ್ಯೆಗೆ ರಾ ಮುಖ್ಯಸ್ಥ ಸಮಂತ್‌ ಗೋಯಲ್‌ ಮೇಲೆ ಭಾರೀ ಒತ್ತಡ ಇತ್ತು. ಅದರಂತೆ ಅವರು ತಮ್ಮದೇ ಸಂಸ್ಥೆಯ ವಿಕ್ರಂ ಯಾದವ್‌ ಎಂಬ ವ್ಯಕ್ತಿಯನ್ನು ಪನ್ನೂನ್‌ ಹತ್ಯೆಗೆ ನಿಯೋಜಿಸಿದ್ದರು. 

ಆದರೆ ಈ ಕುರಿತ ಸುಳಿವು ಪಡೆದ ಅಮೆರಿಕದ ಗುಪ್ತಚರ ಸಂಸ್ಥೆಗಳು ಹತ್ಯೆ ಯತ್ನವನ್ನು ವಿಫಲಗೊಳಿಸಿದವು ಎಂದು ವರದಿ ಹೇಳಿದೆ.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಅವರಿಗೂ ಬಹುಷಃ ಈ ಯೋಜನೆ ಮಾಹಿತಿ ಇತ್ತು. ಆದರೆ ಇದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ವರದಿ ಹೇಳಿದೆ.

ಅಮೆರಿಕದ ಎಫ್‌ಬಿಐ, ಸಿಐಎ ಹಾಗೂ ಇತರೆ ಸಂಸ್ಥೆಗಳ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಈ ಕೃತ್ಯದ ಹಿಂದೆ ಹಿರಿಯ ರಾ ಅಧಿಕಾರಿಗಳು, ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ವಲಯದ ಕೈವಾಡವೂ ಇರುವ ಅಂಶ ಬೆಳಕಿಗೆ ಬಂದಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.