ಸಾರಾಂಶ
ಮುಂಬೈ: ಮಾ.15ರ ನಂತರ ಗ್ರಾಹಕರ ಖಾತೆಗಳು ಹಾಗೂ ವ್ಯಾಲೆಟ್‌ಗಳಿಗೆ ಹಣ ಸ್ವೀಕರಿಸದಂತೆ ಪೇಟಿಎಂ ಬ್ಯಾಂಕ್‌ಗೆ ನಿರ್ಬಂಧ ಹೇರಿರುವ ರಿಸರ್ವ್ ಬ್ಯಾಂಕ್, ಪೇಟಿಎಂ ಆ್ಯಪ್‌ನ ಮೂಲಕ ಯುಪಿಐ ಸೇವೆ ಮುಂದುವರಿಕೆಯಾಗುವಂತೆ ನೋಡಿಕೊಳ್ಳಲು ನೆರವಾಗುವಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೆಷನ್ (ಎನ್‌ಪಿಸಿಐ)ಗೆ ಸೂಚಿಸಿದೆ.
ಇತರ 4-5 ಬ್ಯಾಂಕ್‌ಗಳ ಜತೆ ಪೇಟಿಎಂ ಖಾತೆದಾರರ ಖಾತೆಗಳನ್ನು ಲಿಂಕ್ ಮಾಡಿ ಸೇವೆ ಮುಂದುವರಿಸಲು ಅನುವು ಮಾಡಿಕೊಡಬೇಕು.
ಯುಪಿಐ ಗ್ರಾಹಕರು ತಡೆರಹಿತ ಸೇವೆಯನ್ನು ಪಡೆಯುವ ಸಲುವಾಗಿ ‘ಥರ್ಡ್ ಪಾರ್ಟಿ ಅಪ್ಲಿಕೇಷನ್ ಪ್ರೊವೈಡರ್’ ಆಗುವ ಬೇಡಿಕೆಯನ್ನು ಪರಿಶೀಲಿಸಬೇಕು ಎಂದು ರಿಸರ್ವ್ ಬ್ಯಾಂಕ್ ನಿರ್ದೇಶಿಸಿದೆ.
ಈ ಸಂಬಂಧ ಪೇಟಿಎಂನ ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನಿಂದಲೇ ಕೋರಿಕೆ ಬಂದಿತ್ತು ಎಂದಿದೆ.
ಈವರೆಗೂ ಪೇಟಿಎಂ ಪೇಮೆಂಟ್ ಬ್ಯಾಂಕ್ ಮೂಲಕ ಪೇಟಿಎಂ ಯುಪಿಐ ಬಳಕೆದಾರರ ವಹಿವಾಟು ನಡೆಯುತ್ತಿತ್ತು.
ಆದರೆ ಪೇಮೆಂಟ್ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ ಹೇರಿರುವ ಕಾರಣ ಯುಪಿಐ ಬಳಕೆದಾರರಿಗೆ ಇತರ ಬ್ಯಾಂಕ್‌ಗಳ ಮೂಲಕ ವಹಿವಾಟು ಅನಿವಾರ್ಯವಾಗಲಿದೆ.