ಇಂದು ಆರ್‌ಬಿಐ ವಿತ್ತನೀತಿ ಪ್ರಕಟ: ಬಡ್ಡಿದರ ಯಥಾಸ್ಥಿತಿ?

| Published : Dec 08 2023, 01:45 AM IST

ಸಾರಾಂಶ

ಭಾರತೀಯ ರಿಸರ್ವ್‌ ಬ್ಯಾಂಕ್‌ ಶುಕ್ರವಾರ ತನ್ನ ದ್ವೈಮಾಸಿಕ ಹಣಕಾಸು ವರದಿಯನ್ನು ಪ್ರಕಟಿಸಲಿದ್ದು, ಪ್ರಸ್ತುತ ಇರುವ ರೆಪೋದರವನ್ನೇ ಮುಂದುವರೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಶುಕ್ರವಾರ ತನ್ನ ದ್ವೈಮಾಸಿಕ ಹಣಕಾಸು ವರದಿಯನ್ನು ಪ್ರಕಟಿಸಲಿದ್ದು, ಪ್ರಸ್ತುತ ಇರುವ ರೆಪೋದರವನ್ನೇ ಮುಂದುವರೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ನಿರೀಕ್ಷೆಗಿಂತ ಭಾರತದ ಆರ್ಥಿಕ ವ್ಯವಸ್ಥೆ ಉತ್ತಮವಾಗಿರುವುದರಿಂದ ಈ ಬಾರಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ. ಅಲ್ಲದೇ ಈ ತಿಂಗಳೂ ಸಹ ಪ್ರಸ್ತುತ ಇರುವ ಶೇ.5.4ರ ದರದಲ್ಲಿಯೇ ಹಣದುಬ್ಬರ ಸಹ ಮುಂದುವರೆಯುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ ಸತತ 5ನೇ ಬಾರಿಗೂ ಸಹ ಶೇ.6.5ರ ದರದಲ್ಲೇ ರೆಪೋದರ ಇರಲಿದೆ ಎನ್ನಲಾಗಿದೆ.