ಸಾರಾಂಶ
ಹಾರಾಡಲಾಗದ ಸ್ಥಿತಿಯಲ್ಲಿ ಕಳೆದ 36 ದಿನಗಳಿಂದ ಕೇರಳ ರಾಜಧಾನಿ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಬ್ರಿಟನ್ ಸೇನೆಯ ಅತ್ಯಾಧುನಿಕ ಎಫ್-35ಬಿ ಸ್ಟೆಲ್ತ್ ಯುದ್ಧ ವಿಮಾನವನ್ನು ಕೊನೆಗೂ ದುರಸ್ತಿ ಮಾಡಲಾಗಿದೆ.
ತಿರುವನಂತಪುರ: ಹಾರಾಡಲಾಗದ ಸ್ಥಿತಿಯಲ್ಲಿ ಕಳೆದ 36 ದಿನಗಳಿಂದ ಕೇರಳ ರಾಜಧಾನಿ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಬ್ರಿಟನ್ ಸೇನೆಯ ಅತ್ಯಾಧುನಿಕ ಎಫ್-35ಬಿ ಸ್ಟೆಲ್ತ್ ಯುದ್ಧ ವಿಮಾನವನ್ನು ಕೊನೆಗೂ ದುರಸ್ತಿ ಮಾಡಲಾಗಿದೆ. ಹೀಗಾಗಿ ಭಾರತ ಸರ್ಕಾರ ಅನುಮತಿ ಪಡೆದು ಒಂದೆರಡು ದಿನಗಳಲ್ಲೇ ವಿಮಾನ ಬ್ರಿಟನ್‌ಗೆ ಮರಳಲಿದೆ ಎನ್ನಲಾಗಿದೆ.
ದೋಷ ಕಾಣಿಸಿಕೊಂಡ ಕಾರಣ ಕೇರಳದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ್ದ ವಿಮಾನದಲ್ಲಿ ಬಳಿಕ ಆಕ್ಸಿಲರಿ ಪವರ್ ಯೂನಿಟ್‌ನಲ್ಲಿ ಗಂಭೀರ ದೋಷ ಕಾಣಿಸಿಕೊಂಡಿತ್ತು. ಹೀಗಾಗಿ ಹಾರಾಟ ಮಾಡಲಾಗದೇ ನಿಲ್ದಾಣದಲ್ಲೇ ಉಳಿದುಕೊಂಡಿತ್ತು. ಅದನ್ನು ಬ್ರಿಟನ್‌ನಿಂದ ಬಂದಿದ್ದ ತಜ್ಞರ ತಂಡ ಸರಿ ಮಾಡಿದೆ.ಒಂದು ವೇಳೆ ದುರಸ್ತಿ ಸಾಧ್ಯವಾಗದೇ ಹೋದಲ್ಲಿ ವಿಮಾನದ ಹಲವು ಭಾಗ ಬೇರ್ಪಡಿಸಿ ಬೇರೊಂದು ವಿಮಾನದಲ್ಲಿ ಹಾಕಿಕೊಂಡು ಯೋಜನೆ ಕೂಡಾ ರೂಪಿಸಲಾಗಿತ್ತು. ಈ ನಡುವೆ ಏರ್‌ಪೋರ್ಟ್‌ನಲ್ಲಿ 36 ದಿನ ತಂಗಿದ್ದಕ್ಕೆ ಬ್ರಿಟನ್ ಸೇನೆ ಅಂದಾಜು 8 ಲಕ್ಷ ರು. ಶುಲ್ಕ ಪಾವತಿಸಬೇಕಿದೆ.