ಕೋಲ್ಕತಾ ವೈದ್ಯೆ ಮೇಲೆ ರೇಪ್‌ ಆಗಿಲ್ಲ: ವರದಿ!

| Published : Dec 25 2024, 12:46 AM IST

ಸಾರಾಂಶ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತಾದ ಆರ್‌ಜೆ ಆಸ್ಪತ್ರೆಯಲ್ಲಿನ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಘಟನಾ ಸ್ಥಳದಲ್ಲಿನ ದಾಖಲೆ ಸಂಗ್ರಹಿಸಿ ಅಧ್ಯಯನ ನಡೆಸಿದ್ದ ವಿಧಿವಿಜ್ಞಾನ ತಜ್ಞರು, ಘಟನೆ ನಡೆದಿದ್ದು ಎನ್ನಲಾದ ಸೆಮಿನಾರ್‌ ಹಾಲ್‌ನಲ್ಲಿ ಆರೋಪಿ ಸಂಜಯ್‌ ರಾಯ್‌ ಮತ್ತು ವೈದ್ಯೆ ನಡೆದ ಹಲ್ಲೆ ನಡೆದ ಅಥವಾ ಆಕೆ ಪ್ರತಿರೋಧ ತೋರಿದ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ.

ಕೋಲ್ಕತಾ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತಾದ ಆರ್‌ಜೆ ಆಸ್ಪತ್ರೆಯಲ್ಲಿನ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಘಟನಾ ಸ್ಥಳದಲ್ಲಿನ ದಾಖಲೆ ಸಂಗ್ರಹಿಸಿ ಅಧ್ಯಯನ ನಡೆಸಿದ್ದ ವಿಧಿವಿಜ್ಞಾನ ತಜ್ಞರು, ಘಟನೆ ನಡೆದಿದ್ದು ಎನ್ನಲಾದ ಸೆಮಿನಾರ್‌ ಹಾಲ್‌ನಲ್ಲಿ ಆರೋಪಿ ಸಂಜಯ್‌ ರಾಯ್‌ ಮತ್ತು ವೈದ್ಯೆ ನಡೆದ ಹಲ್ಲೆ ನಡೆದ ಅಥವಾ ಆಕೆ ಪ್ರತಿರೋಧ ತೋರಿದ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ.

ಈ ಕುರಿತ ವರದಿಯನ್ನು ಅದು ಸೆ.11ರಂದು ಸಿಬಿಐಗೆ ಹಸ್ತಾಂತರಿಸಿದೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ, ಅತ್ಯಾಚಾರ ನಡೆದಿದೆ ಎಂದ ವಿಶೇಷ ತನಿಖಾ ತಂಡ ಹಾಗೂ ಕೋಲ್ಕತಾ ಪೊಲೀಸರ ತನಿಖೆಯ ಬಗ್ಗೆ ಸಂದೇಹ ವ್ಯಕ್ತಪಡಿಸಲಾಗುತ್ತಿದೆ.

ಸಿಬಿಐ ಕಚೇರಿಗೆ ಬೀಗ:

ಈ ನಡುವೆ ಇಲ್ಲಿನ ಆರ್‌ಜಿ ಕರ್‌ ಕಾಲೇಜಿನಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ವಿಚಾರಣೆಯ ವಿಳಂಬದ ವಿರುದ್ಧ ಕಿರಿಯ ವೈದ್ಯರು ಸಾಲ್ಟ್‌ಲೇಕ್‌ನಲ್ಲಿರುವ ಸಿಬಿಐ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಜತೆಗೆ, ಆರೋಪಿಗಳನ್ನು ರಕ್ಷಿಸುವಲ್ಲಿ ಅಧಿಕಾರಿಗಳು ಪೊಲೀಸರೊಂದಿಗೆ ಶಾಮೀಲಾಗಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.