ಲಂಚ ರೂಪದಲ್ಲಿ ವಾದ್ರಾಗೆ ಭೂಮಿ : ಇಡಿ ಚಾರ್ಜ್‌ಶೀಟ್‌

| N/A | Published : Aug 11 2025, 01:41 AM IST / Updated: Aug 11 2025, 04:30 AM IST

ಲಂಚ ರೂಪದಲ್ಲಿ ವಾದ್ರಾಗೆ ಭೂಮಿ : ಇಡಿ ಚಾರ್ಜ್‌ಶೀಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಗುರುಗ್ರಾಮದ ಭೂ ಖರೀದಿ ಅಕ್ರಮಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ಪತಿ, ಉದ್ಯಮಿ ರಾಬರ್ಟ್‌ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಪಿಎಂಎಲ್‌ಎ ವಿಶೇಷ ಕೋರ್ಟ್‌ಗೆ ವಿಸ್ತೃತ ಚಾರ್ಜ್‌ಶೀಟ್‌ ಸಲ್ಲಿಸಿದೆ.

 ನವದೆಹಲಿ: ಗುರುಗ್ರಾಮದ ಭೂಖರೀದಿ ಅಕ್ರಮಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ಪತಿ, ಉದ್ಯಮಿ ರಾಬರ್ಟ್‌ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಪಿಎಂಎಲ್‌ಎ ವಿಶೇಷ ಕೋರ್ಟ್‌ಗೆ ವಿಸ್ತೃತ ಚಾರ್ಜ್‌ಶೀಟ್‌ ಸಲ್ಲಿಸಿದೆ. 

ಇದರಲ್ಲಿ ಭೂಮಿಯನ್ನೇ ಲಂಚ ರೂಪದಲ್ಲಿ ಪಡೆದುಕೊಂಡು ಅದನ್ನು 58 ಕೋಟಿ ರು.ಗೆ ಮಾರಿ ಅಕ್ರಮ ಲಾಭ ಮಾಡಿಕೊಂಡ ಆರೋಪ ಹೊರಿಸಿದೆ. ಜೊತೆಗೆ ಪ್ರಕರಣದಲ್ಲಿ ವಾದ್ರಾಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದೆ.

ಈ ಕುರಿತು ವಾದ್ರಾಗೆ ಕೋರ್ಟ್‌ ನೋಟಿಸ್‌ ಜಾರಿ ಮಾಡಿದ್ದು, ಆ.28ರಂದು ವಿಚಾರಣೆ ನಡೆಯಲಿದೆ. ಈ ಹಿಂದಿನ 2 ವಿಚಾರಣೆಯಲ್ಲಿ ವಾದ್ರಾ ಈ ಬಗ್ಗೆ ಇ.ಡಿ. ವಿಚಾರಣೆ ವೇಳೆ ಹಾರಿಕೆ ಉತ್ತರ ನೀಡಿದ್ದರು ಎನ್ನಲಾಗಿದೆ.

ಜು.17ರಂದು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ, ‘ಶಿಕೋಪುರ ಗ್ರಾಮದಲ್ಲಿ ತಮ್ಮ ಸ್ಕೈಲೈಟ್‌ ಹಾಸ್ಟಿಟಾಲಿಟಿ ಪ್ರೈವೇಟ್‌ ಲಿ. ಕಂಪನಿ 3.5 ಎಕ್ರೆ ಭೂಮಿಯನ್ನು 7.5 ಕೋಟಿ ರು. ನೀಡಿ ಖರೀದಿಸಿದ್ದಾಗಿ ವಾದ್ರಾ ಹೇಳಿದ್ದರು. ಆದರೆ ಇದು ಸುಳ್ಳು. ಇದನ್ನು ಲಂಚರೂಪದಲ್ಲಿ ಪಡೆಯಲಾಗಿತ್ತು. ಇದಕ್ಕಾಗಿ ನೀಡಿದ್ದ ಚೆಕ್‌ನ ನಗದೀಕರಣ ಆಗಿಯೇ ಇಲ್ಲ’ ಎಂದಿದೆ.

‘ಆಗಿನ ಹರ್ಯಾಣ ಸಿಎಂ ಭೂಪಿಂದರ್‌ ಸಿಂಗ್‌ ಹೂಡಾ ಅವರ ಅನುಮತಿ ಮೇರೆಗೆ ಓಂಕಾರೇಶ್ವರ ಪ್ರಾಪರ್ಟೀಸ್‌ ಪ್ರೈ.ಲಿ., ಎಂಬ ಕಂಪನಿಯು ಗೃಹ ನಿರ್ಮಾಣ ಯೋಜನೆಯ ಲೈಸೆನ್ಸ್‌ ಪಡೆದದಿತ್ತು. ಈ ಲೈಸೆನ್ಸ್‌ ಕೊಡಿಸಲು ವಾದ್ರಾ ಸಹಾಯ ಮಾಡಿದ್ದರು. ಅದಕ್ಕೆ ಉಪಕಾರವಾಗಿ ಓಂಕಾರೇಶ್ವರ ಕಂಪನಿಯು ವಾದ್ರಾ ಕಂಪನಿಗೆ (ಲಂಚ ರೂಪದಲ್ಲಿ) ಭೂಮಿ ಹಸ್ತಾಂತರಿಸಿತ್ತು. ಬಳಿಕ 58 ಕೋಟಿ ರು.ಗೆ ವಾದ್ರಾ ಅವರು ಡಿಎಲ್‌ಎಫ್‌ಗೆ ಈ ಭೂಮಿ ಮಾರಿದ್ದರು. ಈ ರೀತಿ ಅಕ್ರಮವಾಗಿ 58 ಕೋಟಿ ರು. ಲಾಭ ಮಾಡಿಕೊಂಡಿದ್ದರು’ ಎಂದು ಇ.ಡಿ. ಹೇಳಿದೆ.

‘ಈ 58 ಕೋಟಿ ರು.ಗಳ ಪೈಕಿ 53 ಕೋಟಿ ರು. ಅನ್ನು ಸ್ಕೈಲೈಟ್‌ ಹಾಸ್ಟಿಟಾಲಿಟಿ ಸಂಸ್ಥೆ ಮೂಲಕ ನೀಡಲಾಗಿದ್ದರೆ, ಉಳಿದ 5 ಕೋಟಿ ಅನ್ನು ಬ್ಲೂಬ್ರೀಜ್‌ ಟ್ರೇಡಿಂಗ್‌ ಕಂಪನಿ ಮೂಲಕ ವರ್ಗಾವಣೆ ಮಾಡಲಾಗಿತ್ತು. ಎಲ್ಲವೂ ಬೇನಾಮಿ. ಇದು ಅಕ್ರಮ ವರ್ಗಾವಣೆ’ ಎಂದು ಜಾರ್ಜ್‌ಶೀಟಲ್ಲಿ ಹೇಳಲಾಗಿದೆ.

ಏನಿದು ಪ್ರಕರಣ?

2008ರಲ್ಲಿ ರಾಬರ್ಟ್‌ ವಾದ್ರಾ ಹರ್ಯಾಣದಲ್ಲಿ 7.5 ಕೋಟಿ ರು. ಕೊಟ್ಟು 3.5 ಎಕರೆ ಭೂಮಿ ಖರೀದಿ ಮಾಡಿದ್ದರು

ಇದೇ ಜಮೀನನ್ನು 2013ರಲ್ಲಿ ಡಿಎಎಲ್‌ ಸಂಸ್ಥೆಗೆ 58 ಕೋಟಿ ರು.ಗೆ ರಾಬರ್ಟ್‌ ವಾದ್ರಾ ಮಾರಾಟ ಮಾಡಿದ್ದರು

ಡಿಎಲ್‌ಎಫ್‌ ಸಂಸ್ಥೆ ಲಂಚದ ಬದಲು ಭೂ ಖರೀದಿಗೆ ಭಾರೀ ಮೊತ್ತದ ನೀಡಿದೆ ಎಂಬುದು ಈವರೆಗಿನ ಆರೋಪ

ಆದರೆ 3.5 ಎಕರೆ ಜಾಗವೂ ಓಂಕಾರೇಶ್ವರ ಸಂಸ್ಥೆಯಿಂದ ಲಂಚವಾಗಿ ಪಡೆದಿದ್ದು ಎಂಬುದು ಹೊಸ ಆರೋಪ

Read more Articles on