ಸಾರಾಂಶ
ನವದೆಹಲಿ: ಹರ್ಯಾಣದ ಶಿಖೋಪುರದಲ್ಲಿ 2008ರಲ್ಲಿ ನಡೆಸದಲಾದ ಭೂಖರೀದಿ ಅವ್ಯವಹಾರ ಸಂಬಂಧ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ದಾಖಲಿಸಿದೆ. ಜೊತೆಗೆ ವಾದ್ರಾಗೆ ಸೇರಿದ 38 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ವಾದ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ಇದೇ ಮೊದಲು
.ಏನಿದು ಪ್ರಕರಣ?:2008ರಲ್ಲಿ ವಾದ್ರಾ ನಿರ್ದೇಶಕರಾಗಿದ್ದ ಸ್ಕೈಲೈನ್ ಕಂಪನಿ, ಹರ್ಯಾಣದ ಗುರುಗ್ರಾಮ ಬಳಿಕ ಮನೇಸರ್- ಶಿಖೋಪುರ್ ಪ್ರದೆಶದಲ್ಲಿ 3.5 ಎಕರೆ ಜಾಗವನ್ನು 7.5 ಕೋಟಿ ರು.ಗೆ ಖರೀದಿಸಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿತ್ತು. 2012ರಲ್ಲಿ ಇದೇ ಜಾಗವನ್ನು ವಾದ್ರಾ, ಡಿಎಲ್‌ಎಫ್ ಸಂಸ್ಥೆಗೆ ಭರ್ಜರಿ 58 ಕೋಟಿ ರು.ಗೆ ಮಾರಾಟ ಮಾಡಿದ್ದರು. ಇದು ಡಿಎಲ್‌ಎಫ್‌ಗೆ ಕಾಂಗ್ರೆಸ್ ಸರ್ಕಾರ ನೆರವು ನೀಡಿದ್ದಕ್ಕೆ ಅದು ಲಂಚದ ರೂಪದಲ್ಲಿ ಹೆಚ್ಚಿನ ಹಣ ನೀಡಿ ವಾದ್ರಾರಿಂದ ಭೂಮಿ ಖರೀದಿಸಿದೆ ಎಂದು ವಿಪಕ್ಷ ಬಿಜೆಪಿ ಆರೋಪಿಸಿತ್ತು.
2012ರಲ್ಲಿ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ, ಜಮೀನು ಖರೀದಿ ವ್ಯವಹಾರು ರಾಜ್ಯದ ಭೂ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಖರೀದಿ ರದ್ದುಪಡಿಸಿದ್ದರು. ಈ ವಿವಾದಗಳ ನಡುವೆಯೇ ಭೂ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು 2018ರಲ್ಲಿ ಹರ್ಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆಧರಿಸಿದ್ದರು. ಬಳಿಕ ಇದರ ಆಧಾರದಲ್ಲಿ ಇ.ಡಿ ಪ್ರತ್ಯೇಕ ಕೇಸು ದಾಖಲಿಸಿ ತನಿಖೆ ನಡೆಸಿತ್ತು.