ಯುರೋಪಿಯನ್ ದೇಶಗಳ ಕುರಿತು ಭಾರತ ಇತ್ತೀಚೆಗೆ ಮಾಡಿಕೊಂಡ ಒಪ್ಪಂದವನ್ನು ‘ಮದರ್ ಆಫ್ ಡೀಲ್ಸ್’ ಎಂದು ಬಣ್ಣಿಸಿದ್ದರೆ, ಸೋಮವಾರ ಭಾರತ ಮತ್ತು ಅಮೆರಿಕ ಘೋಷಿಸಿದ ಒಪ್ಪಂದ ಮತ್ತು ಭಾರತದ ಮೇಲಿನ ಅಮೆರಿಕದ ತೆರಿಗೆ ಕಡಿತ ಪ್ರಮಾಣವನ್ನು ‘ಫಾದರ್ ಆಫ್ ಡೀಲ್ಸ್’ ಎಂದು ಬಣ್ಣಿಸಲಾಗಿದೆ.
- ಅಮೆರಿಕ ಮೆಗಾ ಟ್ರೇಡ್ ಡೀಲ್‌ನಿಂದ ಮೆಗಾ ಲಾಭ-
ಅಮೆರಿಕ ತೆರಿಗೆ ಕಡಿತ ಶೇ.25ರಿಂದ ಶೇ.18 ಅಲ್ಲ, ಶೇ.50ರಿಂದ ಶೇ.18ಕ್ಕೆಮೂಲ ತೆರಿಗೆಯ ಜೊತೆಗೆ ರಷ್ಯಾ ತೈಲ ಖರೀದಿಗೆ ಹಾಕಿದ್ದ ತೆರಿಗೆಯೂ ರದ್ದು
ಭಾರತದ ಮೇಲಿನ ಅಮೆರಿಕ ತೆರಿಗೆ ಏಷ್ಯಾ ದೇಶಗಳ ಪೈಕಿಯೇ ಅತಿ ಕನಿಷ್ಠ--
ಶೀಘ್ರ ಅಂತಿಮ ಒಪ್ಪಂದಕ್ಕೆ ಸಹಿಶೀಘ್ರವೇ ಒಪ್ಪಂದ ಏರ್ಪಡಲಿದೆ. ಈ ಬಗ್ಗೆ ನಾವು ಜಂಟಿಯಾಗಿ ಮಾಹಿತಿ ನೀಡಲಿದ್ದೇವೆ. ಪ್ರತಿಸ್ಪರ್ಧಿಗಳಿಗಿಂತ ಇದು ಉತ್ತಮ ಒಪ್ಪಂದವಾಗಿದೆ. ಆದರೆ ಒಪ್ಪಂದದಿಂದ ಭಾರತದ ಕೃಷಿ, ಡೈರಿಗೆ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಲ್ಲ. ಇದಕ್ಕೆ ರಕ್ಷಣೆ ಒದಗಿಸುತ್ತೇವೆ.
- ಪೀಯೂಷ್ ಗೋಯಲ್, ವಾಣಿಜ್ಯ ಸಚಿವ--
ಸೆನ್ಸೆಕ್ಸ್ 2072 ಅಂಕ ನೆಗೆತ:₹12 ಲಕ್ಷ ಕೋಟಿ ಸಂಪತ್ತು ವೃದ್ಧಿ
---ನವದೆಹಲಿ: ಯುರೋಪಿಯನ್ ದೇಶಗಳ ಕುರಿತು ಭಾರತ ಇತ್ತೀಚೆಗೆ ಮಾಡಿಕೊಂಡ ಒಪ್ಪಂದವನ್ನು ‘ಮದರ್ ಆಫ್ ಡೀಲ್ಸ್’ ಎಂದು ಬಣ್ಣಿಸಿದ್ದರೆ, ಸೋಮವಾರ ಭಾರತ ಮತ್ತು ಅಮೆರಿಕ ಘೋಷಿಸಿದ ಒಪ್ಪಂದ ಮತ್ತು ಭಾರತದ ಮೇಲಿನ ಅಮೆರಿಕದ ತೆರಿಗೆ ಕಡಿತ ಪ್ರಮಾಣವನ್ನು ‘ಫಾದರ್ ಆಫ್ ಡೀಲ್ಸ್’ ಎಂದು ಬಣ್ಣಿಸಲಾಗಿದೆ. ಕಾರಣ ಸೋಮವಾರ ಟ್ರಂಪ್ ತಮ್ಮ ಘೋಷಣೆ ವೇಳೆ ತೆರಿಗೆಯನ್ನು ಶೇ.25ರಿಂದ ಶೇ.18ಕ್ಕೆ ಇಳಿಸಲಾಗುವುದು ಎಂದು ಘೋಷಿಸಿದ್ದರು. ಆದರೆ ಅದು ವಾಸ್ತವವಾಗಿ ಶೇ.25ರಿಂದ ಶೇ.18ಕ್ಕೆ ಅಲ್ಲ, ಬದಲಾಗಿ ಶೇ.50ರಿಂದ ಶೇ.18ಕ್ಕೆ ಎಂದು ಉಭಯ ಸರ್ಕಾರಗಳು ಖಚಿತಪಡಿಸಿವೆ.
ಸೋಮವಾರದ ಕಡಿತದ ಬಳಿಕ, ಭಾರತದ ಮೇಲಿನ ಅಮೆರಿಕದ ತೆರಿಗೆ ಪ್ರಮಾಣವು ಏಷ್ಯಾ ದೇಶಗಳಲ್ಲೇ ಅತ್ಯಂತ ಕನಿಷ್ಠ ಪ್ರಮಾಣಕ್ಕೆ ಇಳಿದಿದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಪ್ರಮುಖ ದೇಶಗಳ ಪೈಕಿ 3ನೇ ಅತ್ಯಂತ ಕನಿಷ್ಠ ಪ್ರಮಾಣವಾಗಿ ಹೊರಹೊಮ್ಮಿದೆ.ಈ ನಡುವೆ ಅಮೆರಿಕದಲ್ಲಿನ ಭಾರತದ ಮಾಜಿ ರಾಯಭಾರಿ ಹರ್ಷವರ್ಧನ್ ಶೃಂಗ್ಲಾ ಇದನ್ನು ‘ಫಾದರ್ ಆಫ್ ಆಲ್ ಡೀಲ್ಸ್’ ಎಂದು ಬಣ್ಣಿಸಿದ್ದಾರೆ.ಭರ್ಜರಿ ಕಡಿತ:
ಭಾರತದ ಮೇಲಿನ ತೆರಿಗೆಯನ್ನು ಶೇ.25ರಿಂದ ಶೇ.18ಕ್ಕೆ ಇಳಿಸಿದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ ಬಳಿಕ ಈ ಬಗ್ಗೆ ಸಾಕಷ್ಟು ಅನುಮಾನಗಳು ಎದ್ದಿದ್ದವು. ಈ ಬಗ್ಗೆ ಇದೀಗ ಸ್ವತಃ ಅಮೆರಿಕ ಅಧ್ಯಕ್ಷರ ಗೃಹಕಚೇರಿ ಶ್ವೇತಭವನ, ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಮತ್ತು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.ಭಾರತಕ್ಕೆ ಇದುವರೆಗೂ ಅಮೆರಿಕ ಶೇ.25ರಷ್ಟು ಪ್ರತಿತೆರಿಗೆ ಮತ್ತು ರಷ್ಯಾ ತೈಲ ಖರೀದಿ ಮಾಡಿದ್ದಕ್ಕೆ ದಂಡದ ರೂಪದಲ್ಲಿ ಹೆಚ್ಚುವರಿ ಶೇ.25ರಷ್ಟು ತೆರಿಗೆ ಹೇರುತ್ತಿತ್ತು.
ಈ ಪೈಕಿ ಮೊದಲ ಶೇ.25ರಷ್ಟು ಪ್ರತಿತೆರಿಗೆಯಲ್ಲಿ ಶೇ.7ರಷ್ಟು ಕಡಿಮೆ ಮಾಡಿ ಶೇ.18ಕ್ಕೆ ಇಳಿಸಲಾಗಿದೆ. ಜೊತೆಗೆ ರಷ್ಯಾ ತೈಲ ಖರೀದಿಯನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಭಾರತ ಒಪ್ಪಿರುವ ಕಾರಣ ಆ ಶೇ.25ರಷ್ಟು ತೆರಿಗೆಯೂ ರದ್ದಾಗಲಿದೆ ಎಂದು ತಿಳಿಸಿದೆ. ಹೀಗಾಗಿ ಭಾರತದ ಮೇಲಿನ ಶೇ.50ರಷ್ಟಿದ್ದ ತೆರಿಗೆ ಶೇ.18ಕ್ಕೆ ಇಳಿಯಲಿದೆ.ಏಷ್ಯಾದಲ್ಲೇ ಅತಿ ಕಡಿಮೆ:
ಇಳಿಕೆ ಬಳಿಕ ಅಮೆರಿಕದ ತೆರಿಗೆ ವ್ಯಾಪ್ತಿಯಲ್ಲಿ ಭಾರತ ಏಷ್ಯಾದಲ್ಲೇ ಅತ್ಯಂತ ಕಡಿಮೆ ತೆರಿಗೆ ಹೊಂದಿದ ದೇಶವಾಗಿ ಹೊರಹೊಮ್ಮಿದೆ. ಜೊತೆಗೆ ಜಾಗತಿಕವಾಗಿ ಪ್ರಮುಖ ದೇಶಗಳ ಪೈಕಿ 3ನೇ ಸ್ಥಾನ ಪಡೆದಿದೆ. ಮೊದಲೆರಡು ಸ್ಥಾನಗಳಲ್ಲಿ ಬ್ರಿಟನ್ (ಶೇ.10) ಮತ್ತು ಐರೋಪ್ಯ ಒಕ್ಕೂಟ (ಶೇ.15) ಇವೆ.ಪಾಕ್, ಚೀನಾಗಿಂತ ಕಮ್ಮಿ:
ಇತ್ತೀಚೆಗೆ ಅಮೆರಿಕಕ್ಕೆ ಆಪ್ತವಾಗುತ್ತಿರುವ ಪಾಕಿಸ್ತಾನದ ಮೇಲೆ ಅಮೆರಿಕ ಶೇ.19ರಷ್ಟು ತೆರಿಗೆ ಹೇರಿದೆ. ಚೀನಾದ ಮೇಲೆ ಇದು ಶೇ.30-35ರಷ್ಟಿದೆ. ಉಳಿದಂತೆ ಇಂಡೋನೇಷ್ಯಾಗೆ ಶೇ.19, ಬಾಂಗ್ಲಾ ಹಾಗೂ ವಿಯೆಟ್ನಾಂಗೆ ಶೇ.20 ತೆರಿಗೆಯಿದೆ. ಇವೆಲ್ಲವುಗಳಿಗಿಂತ ಭಾರತದ ಮೇಲಿನ ಸುಂಕ ಕಡಿಮೆಯಾಗಿದೆ.ಭಾರತಕ್ಕೇನು ಲಾಭ?:
ತೆರಿಗೆ ಇಳಿಕೆಯಿಂದಾಗಿ ಭಾರತದಿಂದ ರಫ್ತಾಗುವ ವಸ್ತುಗಳ ಬೆಲೆ ಕ್ಷೀಣಿಸಲಿದ್ದು, ಅಮೆರಿಕದಲ್ಲಿ ಅವುಗಳ ಬೇಡಿಕೆ ವೃದ್ಧಿಸಲಿದೆ. ಪರಿಣಾಮ ಭಾರತದ ಜವಳಿ, ಎಲೆಕ್ಟ್ರಿಕ್ ಉಪಕರಣ, ಅಮೂಲ್ಯ ಲೋಹ, ಹರಳು, ಔಷಧಿಗಳಿಗೆ ಅಮೆರಿಕದ ಮಾರುಕಟ್ಟೆ ಇನ್ನಷ್ಟು ತೆರೆದುಕೊಳ್ಳುತ್ತದೆ.