ಸಾರಾಂಶ
ಶೀಘ್ರ 19 ಎನ್‌ಸಿಪಿ ಶಾಸಕರು ಶರದ್ ಬಣಕ್ಕೆ ಬರಲಿದ್ದಾರೆ ಎಂದು ರೋಹಿತ್ ಪವಾರ್ ತಿಳಿಸಿದ್ದಾರೆ.
ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) 18ರಿಂದ 19 ಶಾಸಕರು ಮುಂಗಾರು ಅಧಿವೇಶನದ ಬಳಿಕ ತಮ್ಮ ಪಕ್ಷಕ್ಕೆ ಬರಲಿದ್ದಾರೆ ಎಂದು ಎನ್‌ಸಿಪಿ (ಶರದ್) ನಾಯಕ ರೋಹಿತ್ ಪವಾರ್ ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2023ರಲ್ಲಿ ಪಕ್ಷ ಇಬ್ಭಾಗವಾದ ಬಳಿಕ ಎನ್‌ಸಿಪಿ (ಶರದ್) ಹಿರಿಯ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡದ ವಿಧಾನಸಭಾ ಸದಸ್ಯರು ಶರದ್ ಪವಾರ್‌ರ ಸಂಪರ್ಕದಲ್ಲಿ ಇದ್ದಾರೆ.
ಆದರೆ ಅವರು ತಮ್ಮ ಕ್ಷೇತ್ರಕ್ಕೆ ಅನುದಾನ ಪಡೆಯಲು ಶಾಸಕಾಂಗ ಸಭೆಗಳಿಗೆ ಹಾಜರಾಗುತ್ತಿದ್ದಾರೆ. ಯಾರನ್ನು ತಮ್ಮ ಕಡೆ ಬರಮಾಡಿಕೊಳ್ಳಬೇಕು ಎಂಬುದನ್ನು ಪಕ್ಷದ ನಾಯಕರು ನಿರ್ಧರಿಸುತ್ತಾರೆ’ ಎಂದರು. ಮುಂಗಾರು ಅಧಿವೇಶನ ಜೂ.27ರಿಂದ ಜು.12ರವರೆಗೆ ನಡೆಯಲಿದ್ದು, ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನದ ಕೊನೆಯ ಅಧಿವೇಶನವಾಗಿದೆ.