ಷೇರುಬೆಲೆ ಶೇ.6ರಷ್ಟು ಭಾರೀ ಕುಸಿತ - ಇನ್ಫಿ ಮೂರ್ತಿ ಕುಟುಂಬಕ್ಕೆ ಒಂದೇ ದಿನದಲ್ಲಿ 1800 ಕೋಟಿ ರು.ನಷ್ಟ!

| Published : Jan 19 2025, 02:17 AM IST / Updated: Jan 19 2025, 04:40 AM IST

ಸಾರಾಂಶ

ಬಾಂಬೆ ಷೇರುಪೇಟೆಯಲ್ಲಿ ಶುಕ್ರವಾರ ಇನ್ಫೋಸಿಸ್‌ ಷೇರುಬೆಲೆ ಶೇ.6ರಷ್ಟು ಭಾರೀ ಕುಸಿತ ಕಂಡ ಪರಿಣಾಮ, ಕಂಪನಿಯ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಕುಟುಂಬಕ್ಕೆ ಒಂದೇ ದಿನದಲ್ಲಿ 1850 ಕೋಟಿ ರು.ನಷ್ಟು ಭಾರೀ ನಷ್ಟ ಸಂಭವಿಸಿದೆ.

ಮುಂಬೈ: ಬಾಂಬೆ ಷೇರುಪೇಟೆಯಲ್ಲಿ ಶುಕ್ರವಾರ ಇನ್ಫೋಸಿಸ್‌ ಷೇರುಬೆಲೆ ಶೇ.6ರಷ್ಟು ಭಾರೀ ಕುಸಿತ ಕಂಡ ಪರಿಣಾಮ, ಕಂಪನಿಯ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಕುಟುಂಬಕ್ಕೆ ಒಂದೇ ದಿನದಲ್ಲಿ 1850 ಕೋಟಿ ರು.ನಷ್ಟು ಭಾರೀ ನಷ್ಟ ಸಂಭವಿಸಿದೆ.

ಕಂಪನಿಯಲ್ಲಿ ನಾರಾಯಣ ಮೂರ್ತಿ ಕುಟುಂಬ ಶೇ.4.02ರಷ್ಟು ಷೇರು ಪಾಲು ಹೊಂದಿದೆ. ಇದರ ಮೌಲ್ಯ ಅಂದಾಜು 30300 ಕೋಟಿ ರು.ನಷ್ಟಿದೆ. ಆದರೆ ಕಂಪನಿಯ ತ್ರೈಮಾಸಿಕ ವರದಿ ನಿರೀಕ್ಷೆಗಿಂತ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಶುಕ್ರವಾರ ಇನ್ಫೋಸಿಸ್‌ ಷೇರು ಮೌಲ್ಯ ಶೇ.6ರಷ್ಟು ಭಾರೀ ಇಳಿಕೆ ಕಂಡಿತ್ತು. ಪರಿಣಾಮ ನಾರಾಯಣ ಮೂರ್ತಿ ಅವರ ಕುಟುಂಬದ ಹೊಂದಿರುವ ಷೇರುಗಳ ಮೌಲ್ಯ 1850 ಕೋಟಿ ರು.ನಷ್ಟು ಇಳಿಕೆ ಕಂಡಿದೆ.