ವೆನಿಜುವೆಲಾ ಮೇಲಿನ ದಾಳಿಯ ಬಳಿಕ ಗ್ರೀನ್‌ಲ್ಯಾಂಡ್‌ ವಶದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪದೇ ಪದೇ ಹೇಳಿಕೆ ಬೆನ್ನಲ್ಲೇ, ಈ ಕುರಿತು ಅಮೆರಿಕ ಸರ್ಕಾರದ ಜೊತೆಗೆ ಮಾತುಕತೆ ನಡೆಸಲು, ಡೆನ್ಮಾರ್ಕ್ ಸರ್ಕಾರ ಪ್ರಸ್ತಾಪ ಮಾಡಿದೆ.

ವಾಷಿಂಗ್ಟನ್‌: ವೆನಿಜುವೆಲಾ ಮೇಲಿನ ದಾಳಿಯ ಬಳಿಕ ಗ್ರೀನ್‌ಲ್ಯಾಂಡ್‌ ವಶದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪದೇ ಪದೇ ಹೇಳಿಕೆ ಬೆನ್ನಲ್ಲೇ, ಈ ಕುರಿತು ಅಮೆರಿಕ ಸರ್ಕಾರದ ಜೊತೆಗೆ ಮಾತುಕತೆ ನಡೆಸಲು, ಡೆನ್ಮಾರ್ಕ್ ಸರ್ಕಾರ ಪ್ರಸ್ತಾಪ ಮಾಡಿದೆ.

ಈ ಹಿಂದೆಯೂ ಈ ವಿಚಾರವಾಗಿ ಭೇಟಿಗೆ ಡೆನ್ಮಾರ್ಕ್‌ ಪ್ರಸ್ತಾಪ

ಈ ಹಿಂದೆಯೂ ಈ ವಿಚಾರವಾಗಿ ಭೇಟಿಗೆ ಡೆನ್ಮಾರ್ಕ್‌ ಪ್ರಸ್ತಾಪ ಮಾಡಿತ್ತಾದರೂ ಭೇಟಿ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಮತ್ತೆ ಟ್ರಂಪ್‌ ಹೇಳಿಕೆ ಬೆನ್ನಲ್ಲೇ ಡೆನ್ಮಾರ್ಕ್‌ ಮತ್ತು ಗ್ರೀನ್‌ಲ್ಯಾಂಡ್‌ನ ವಿದೇಶಾಂಗ ಸಚಿವರು ಅಮೆರಿಕದ

ರುಬಿಯೋ ಅವರು ಮುಂದಿನ ವಾರ ಡೆನ್ಮಾರ್ಕ್‌ ಅಧಿಕಾರಿಗಳ ಭೇಟಿ

ಅಮೆರಿಕದ ವಿದೇಶಾಂಗ ಸಚಿವ ರುಬಿಯೋ ಭೇಟಿಗೆ ಡೆನ್ಮಾರ್ಕ್‌ ಕಾಲಾವಕಾಶ ಕೋರಿದ್ದರೂ ಆ ಭೇಟಿ ಸಾಧ್ಯವಾಗಿರಲಿಲ್ಲ. ಇದೀಗ ಟ್ರಂಪ್‌ ಅವರು ಗ್ರೀನ್‌ ಲ್ಯಾಂಡ್‌ ಅನ್ನು ವಶಕ್ಕೆ ಪಡೆಯುವ ಕುರಿತು ಮತ್ತೊಮ್ಮೆ ಬಹಿರಂಗ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇದೀಗ ಡೆನ್ಮಾರ್ಕ್‌ ವಿದೇಶಾಂಗ ಸಚಿವ ಲಾರ್ಸ್‌ ಲೋಕೆ ರಾಸ್‌ಮುಸೇನ್‌ ಮತ್ತು ಗ್ರೀನ್‌ ಲ್ಯಾಂಡ್‌ನ ವಿದೇಶಾಂಗ ಸಚಿವ ವಿವಿಯನ್‌ ಮೋರ್ಟೋಜಫೆಲ್ಟ್‌ ಅವರು ಅಮೆರಿಕದ ವಿದೇಶಾಂಗ ಸಚಿವ ರುಬಿಯೋ ಅವರ ಭೇಟಿಗೆ ಸಮಯಾವಕಾಶ ಕೇಳಿದ್ದರು. ಇದೀಗ ರುಬಿಯೋ ಅವರು ಮುಂದಿನ ವಾರ ಡೆನ್ಮಾರ್ಕ್‌ ಅಧಿಕಾರಿಗಳ ಭೇಟಿ ಖಚಿತಪಡಿಸಿದ್ದಾರೆ. ಭೇಟಿ ವೇಳೆ ಡೆನ್ಮಾರ್ಕ್‌ ಟ್ರಂಪ್‌ ನಡೆಗೆ ಆಕ್ಷೇಪ ವ್ಯಕ್ತಪಡಿಸುವ ನಿರೀಕ್ಷೆ ಇದೆ.

ಟ್ರಂಪ್‌ ಅವರಿಗೆ ಗ್ರೀನ್‌ ಲ್ಯಾಂಡ್‌ ಅನ್ನು ಖರೀದಿ ಮಾಡುವ ಉದ್ದೇಶವಿದೆ ಎಂದು ರುಬಿಯೋ ಅವರು ಅಮೆರಿಕದ ಕೆಲ ಸಂಸದರ ಮುಂದೆ ಇತ್ತೀಚೆಗೆ ಹೇಳಿಕೊಂಡಿದ್ದರು. ಈ ವಿಚಾರವನ್ನು ‘ದಿ ವಾಲ್‌ ಸ್ಟ್ರೀಟ್‌ ಜರ್ನಲ್‌’ ಪತ್ರಿಕೆ ಮೂಲಗಳನ್ನು ಆಧರಿಸಿ ವರದಿ ಮಾಡಿತ್ತು.

ಯುರೋಪ್ ಕಳವಳ:

ಗ್ರೀನ್‌ ಲ್ಯಾಂಡ್‌ ಕುರಿತ ಟ್ರಂಪ್‌ ಅವರ ಹೇಳಿಕೆಗೆ ಡೆನ್ಮಾರ್ಕ್‌ ಪ್ರಧಾನಿ ಫ್ರೆಡ್‌ರಿಕಸೆನ್‌ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಆ ದ್ವೀಪ ಜನರ ಸ್ವತ್ತು. ಒಂದು ವೇಳೆ ಅಮೆರಿಕ ಗ್ರೀನ್‌ ಲ್ಯಾಂಡ್‌ ವಶಕ್ಕೆ ತೆಗೆದುಕೊಂಡಿದ್ದೇ ಆದರೆ ನ್ಯಾ ಟೋ ಒಕ್ಕೂಟಕ್ಕೆ ಕೊನೆ ಬೀಳಲಿದೆ ಎಂದು ಹೇಳಿದ್ದಾರೆ. ಡೆನ್ಮಾರ್ಕ್‌ ಕಳವಳಕ್ಕೆ ಫ್ರಾನ್ಸ್‌, ಜರ್ಮನಿ, ಇಟಲಿ, ಪೋಲ್ಯಾಂಡ್‌, ಸ್ಪೇನ್‌ ಮತ್ತು ಬ್ರಿಟನ್‌ ಕೂಡ ಬೆಂಬಲ ಸೂಚಿಸಿದೆ.