ಸಾರಾಂಶ
ನರೇಂದ್ರ ಮೋದಿ 3.0 ಸರ್ಕಾರ ಮುಂದಿನ ತಿಂಗಳ 9 ರಂದು ಒಂದು ವರ್ಷ ಪೂರೈಸಲಿದೆ. ಈ ಸಂಭ್ರಮದಲ್ಲಿ ಕೇಂದ್ರ ಒಂದು ವರ್ಷದಲ್ಲಿನ ಸರ್ಕಾರ ಸಾಧನೆ, ಆಪರೇಷನ್ ಸಿಂದೂರ ಕಾರ್ಯಾಚರಣೆ ಸೇರಿದಂತೆ ಎನ್‌ಡಿಎ ಸರ್ಕಾರದ ಹಲವು ಕ್ರಮಗಳ ಬಗ್ಗೆ ಜನರಿಗೆ ತಲುಪಿಸಲು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆಯಿದೆ.
ನವದೆಹಲಿ: ನರೇಂದ್ರ ಮೋದಿ 3.0 ಸರ್ಕಾರ ಮುಂದಿನ ತಿಂಗಳ 9 ರಂದು ಒಂದು ವರ್ಷ ಪೂರೈಸಲಿದೆ. ಈ ಸಂಭ್ರಮದಲ್ಲಿ ಕೇಂದ್ರ ಒಂದು ವರ್ಷದಲ್ಲಿನ ಸರ್ಕಾರ ಸಾಧನೆ, ಆಪರೇಷನ್ ಸಿಂದೂರ ಕಾರ್ಯಾಚರಣೆ ಸೇರಿದಂತೆ ಎನ್‌ಡಿಎ ಸರ್ಕಾರದ ಹಲವು ಕ್ರಮಗಳ ಬಗ್ಗೆ ಜನರಿಗೆ ತಲುಪಿಸಲು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆಯಿದೆ.
ಬಿಜೆಪಿ ವರ್ಷಾಚರಣೆ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದು, ಸಾರ್ವಜನಿಕ ಸಭೆ, ಮೆರವಣಿಗೆ ಮೂಲಕ ಆಪರೇಷನ್ ಸಿಂದೂರ, ವಕ್ಪ್ ತಿದ್ದುಪಡಿ ಕಾಯ್ದೆ, ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಸರ್ಕಾರದ ಮಹತ್ವದ ಕಾರ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ.
ಇದರಲ್ಲಿ ಕೇಂದ್ರ ಸಚಿವರು ಸೇರಿದಂತೆ ಪಕ್ಷದ ಹಿರಿಯ ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ. ದೇಶ ಈಗಷ್ಟೇ ಸಮರ ಪರಿಸ್ಥಿತಿಯಿಂದ ಸಹಜ ಸ್ಥಿತಿಗೆ ಮರಳುತ್ತಿರುವ ಕಾರಣದಿಂದ ಸರಳವಾಗಿ ಆಯೋಜನೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.