ಸಾರಾಂಶ
ಕೀವ್: ಉಕ್ರೇನ್‌ನ ರಾಜಧಾನಿ ಕೀವ್ ಮೇಲೆ 550 ಡ್ರೋನ್ ಹಾಗೂ 11 ಕ್ಷಿಪಣಿ ಬಳಸಿ ಗುರುವಾರ ತಡರಾತ್ರಿ ರಷ್ಯಾ ಬೃಹತ್ ವಾಯುದಾಳಿ ನಡೆಸಿದೆ. ದಾಳಿಗೆ ಕೀವ್‌ನ 5 ಜಿಲ್ಲೆ ವ್ಯಾಪ್ತಿಯಲ್ಲಿ ಹಲವು ಮೂಲಸೌಕರ್ಯಗಳು ಭಾರೀ ಹಾನಿಗೊಳಗಾಗಿದ್ದು, 23 ಜನ ಗಾಯಗೊಂಡಿದ್ದಾರೆ. ರಷ್ಯಾ - ಉಕ್ರೇನ್ ಯುದ್ಧ ಪ್ರಾರಂಭವಾದ ನಂತರದಲ್ಲೇ ಇದು ಅತಿ ದೊಡ್ಡ ವೈಮಾನಿಕ ದಾಳಿಯಾಗಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಸಾಗಣೆಯನ್ನು ಸ್ಥಗಿತಗೊಳಿಸುವ ತಮ್ಮ ಆಡಳಿತದ ನಿರ್ಧಾರದ ಬಗ್ಗೆ ತಿಳಿಸಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ.
ಕೀವ್ ರಷ್ಯಾದ ಮೊದಲ ಗುರಿಯಾಗಿತ್ತು. ದಾಳಿಯಲ್ಲಿ ಕನಿಷ್ಠ 23 ಮಂದಿ ಗಾಯಗೊಂಡಿದ್ದು, 14 ಜನ ಅಸ್ಪತ್ರೆಗೆ ದಾಖಲಾಗಿದ್ದಾರೆ. ಉಕ್ರೇನಿಯನ್ ವಾಯುರಕ್ಷಣಾ ಪಡೆಗಳು 2 ಕ್ರೂಸ್ ಕ್ಷಿಪಣಿಗಳು ಸೇರಿದಂತೆ 270 ಗುರಿಗಳನ್ನು ಹೊಡೆದುರುಳಿಸಿದವು. ಇನ್ನೂ 208 ಗುರಿಗಳು ರಾಡಾರ್‌ನಿಂದ ನಾಶವಾಗಿವೆ. ರಾಜಧಾನಿಯ 10 ಜಿಲ್ಲೆಗಳಲ್ಲಿ ಕನಿಷ್ಠ 5 ಜಿಲ್ಲೆಗಳಲ್ಲಿ ಹಾನಿಯಾಗಿದೆ ಎಂದು ತುರ್ತು ಸೇವೆಗಳು ವರದಿ ಮಾಡಿವೆ.