ಸಾರಾಂಶ
2022ರ ಫೆ.24ರಂದು ಶುರುವಾದ ರಷ್ಯಾ- ಉಕ್ರೇನ್ ಸಮರ ಸೋಮವಾರ 3 ವರ್ಷ ಪೂರೈಸಲಿದೆ. ಇದೇ ಸಂದರ್ಭದಲ್ಲಿ ಉಕ್ರೇನ್ ಮೇಲೆ ರಷ್ಯಾ 267 ಡ್ರೋನ್‌ಗಳನ್ನು ಬಳಸಿ ದಾಳಿ ಮಾಡಿದೆ.
ಕೀವ್: 2022ರ ಫೆ.24ರಂದು ಶುರುವಾದ ರಷ್ಯಾ- ಉಕ್ರೇನ್ ಸಮರ ಸೋಮವಾರ 3 ವರ್ಷ ಪೂರೈಸಲಿದೆ. ಇದೇ ಸಂದರ್ಭದಲ್ಲಿ ಉಕ್ರೇನ್ ಮೇಲೆ ರಷ್ಯಾ 267 ಡ್ರೋನ್‌ಗಳನ್ನು ಬಳಸಿ ದಾಳಿ ಮಾಡಿದೆ. ಇದು ಯುದ್ಧ ಆರಂಭವಾದಾಗಿನಿಂದ ನಡೆಸಲಾದ ಅತಿದೊಡ್ಡ ದಾಳಿ ಎನ್ನಲಾಗಿದೆ. ಇವುಗಳಲ್ಲಿ 138 ಡ್ರೋನ್‌ಗಳನ್ನು ಉಕ್ರೇನ್ ತನ್ನ ವಾಯುರಕ್ಷಣಾ ವ್ಯವಸ್ಥೆ ಮೂಲಕ ತಡೆಹಿಡಿದಿದೆ. ಇನ್ನು 119 ಡ್ರೋನ್‌ಗಳು ಯಾವುದೇ ಹಾನಿ ಮಾಡದೇ ಅದೃಶ್ಯವಾಗಿವೆ. ಉಳಿದ 10 ಡ್ರೋನ್ ಹೊಡೆದುರುಳಿಸಲಾಗಿದೆ.
ಈ ಬಗ್ಗೆ ಉಕ್ರೇನ್‌ನ ವಾಯುಪಡೆ ಕಮಾಂಡರ್ ಯೂರಿ ಇಗ್ನಾಟ್ ಮಾತನಾಡಿ, ‘ಏಕಕಾಲಕ್ಕೆ ರಷ್ಯಾದಿಂದ ಹಾರಿಸಲಾದ 267 ಡ್ರೋನ್‌ಗಳ ಪೈಕಿ 138 ಡ್ರೋನ್‌ಗಳನ್ನು ಖಾರ್ಕೀವ್, ಪೊಲ್ಟಾವಾ, ಸುಮಿ, ಕೀವ್, ಚೆರ್ನಿಹಿವ್, ಮೈಕೊಲೈವ್ ಮತ್ತು ಒಡೆಸಾ ಪ್ರದೇಶಗಳಲ್ಲಿ ತಡೆಹಿಡಿಯಲಾಗಿದ್ದು, 119 ಡ್ರೋನ್‌ಗಳು ಯಾವುದೇ ಹಾನಿ ಮಾಡದೆ ಅದೃಶ್ಯವಾದವು. ಇದರ ಜೊತೆಗೆ 3 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿ ನಡೆದ ದಾಳಿಯಿಂದ 5 ಪ್ರದೇಶಗಳಲ್ಲಿ ಹಾನಿಯಾಗಿದೆ’ ಎಂದು ತಿಳಿಸಿದ್ದಾರೆ.ಉಳಿದ 10 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದರ ವಿಡಿಯೋವನ್ನು ಉಕ್ರೇನ್‌ನ ವಿದೇಶಾಂಗ ಸಚಿವಾಲಯ ಹಂಚಿಕೊಂಡಿದೆ.