ಸಾರಾಂಶ
ಗುಲ್ಮಾರ್ಗ್‌ನಲ್ಲಿ ಸಂಭವಿಸಿದ ಭಾರೀ ಹಿಮಕುಸಿತಕ್ಕೆ ರಷ್ಯಾದ ಚಾರಣಿಗರೊಬ್ಬರು ಮೃತಪಟ್ಟಿದ್ದು, 7 ಜನರನ್ನು ರಕ್ಷಣೆ ಮಾಡಲಾಗಿದೆ.
ಗುಲ್ಮಾರ್ಗ್: ಜಮ್ಮು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಗುರುವಾರ ಹಿಮಕುಸಿತ ಸಂಭವಿಸಿ ರಷ್ಯಾದ ಓರ್ವ ಚಾರಣಿಗ ಮೃತಪಟ್ಟಿದ್ದು, ಸ್ಥಳೀಯ ಗೈಡ್ ಸೇರಿದಂತೆ ಉಳಿದ 7 ಜನರನ್ನು ರಕ್ಷಿಸಲಾಗಿದೆ.
ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗುಲ್ಮಾರ್ಗ್‌ನ ಕಾಂಗ್‌ದೂರಿಯ ಇಳಿಜಾರುಗಳಲ್ಲಿ ಘಟನೆ ಸಂಭವಿಸಿದ್ದು, ಈ ವೇಳೆ ಹಲವಾರು ಸ್ಕೀಯರ್‌ಗಳು ಹಿಮದಡಿಯಲ್ಲಿ ಸಿಲುಕಿದ್ದರು.ಈ ವೇಳೆ ರಷ್ಯಾದ 7 ಜನ ಸ್ಕೀಯರ್‌ಗಳು ಹಾಗೂ ಓರ್ವ ಸ್ಥಳೀಯನನ್ನು ರಕ್ಷಿಸಲಾಯಿತು. ಈ ವೇಳೆ ಓರ್ವರು ಮೃತಪಟ್ಟರು.
ಅದಾಗ್ಯೂ ಸದ್ಯ ಗುಲ್ಮಾರ್ಗ್‌ನಲ್ಲಿ ನಡೆಯುತ್ತಿರುವ 4ನೇ ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ಗೆ ಹಿಮಕುಸಿತದಿಂದ ಯಾವುದೇ ತೊಂದರೆಗಳಾಗಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.