ಶಬರಿಮಲೆ ಅಯ್ಯಪ್ಪ ದೇವಸ್ಥಾನ : ಈ ವರ್ಷದ ಮಕರವಿಳಕ್ಕು ಉತ್ಸವಕ್ಕಾಗಿ ಇಂದಿನಿಂದ ಮತ್ತೆ ದರ್ಶನ ಪ್ರಾರಂಭ
Author : KannadaprabhaNewsNetwork
| Updated : Dec 30 2024, 04:30 AM IST
ಶಬರಿಮಲೆ | Kannada Prabha
Image Credit: KP
ಶಬರಿಮಲೆ: ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಈ ವರ್ಷದ ಮಕರವಿಳಕ್ಕು ಉತ್ಸವಕ್ಕಾಗಿ ಸೋಮವಾರ ಮತ್ತೆ ತೆರೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ,
ಶಬರಿಮಲೆ: ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಈ ವರ್ಷದ ಮಕರವಿಳಕ್ಕು ಉತ್ಸವಕ್ಕಾಗಿ ಸೋಮವಾರ ಮತ್ತೆ ತೆರೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ದೇವಸ್ಥಾನದ ಪ್ರಧಾನ ಅರ್ಚಕ ತಂತ್ರಿ ಕಂಡಾರರು ರಾಜೀವರು ಸಮ್ಮುಖದಲ್ಲಿ ಮೇಲುಶಾಂತಿ ಎಸ್. ಅರುಣ್ ಕುಮಾರ್ ನಂಬೂತಿರಿ ಡಿ.30ರ ಸಂಜೆ 4 ಗಂಟೆಗೆ ದೇವಸ್ಥಾನವನ್ನು ತೆರೆಯಲಿದ್ದಾರೆ.
ಗರ್ಭಗುಡಿಯಲ್ಲಿನ ಅಗ್ಗಿಷ್ಟಿಕೆ ಬೆಳಗಿಸಿದ ನಂತರ ಯಾತ್ರಾರ್ಥಿಗಳು ದರ್ಶನಕ್ಕಾಗಿ ಪವಿತ್ರ 18 ಮೆಟ್ಟಿಲುಗಳನ್ನು ಏರಬಹುದು. ಡಿ.26ರಂದು ರಾತ್ರಿ 10 ಗಂಟೆಗೆ ಮಂಡಲ ಪೂಜೆಯ ನಂತರ ಹರಿವರಾಸನಂ ಪಠಣದೊಂದಿಗೆ ದೇವಾಲಯವನ್ನು ಮುಚ್ಚಲಾಗಿತ್ತು.
Latest Videos
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.