ಸಾರಾಂಶ
ಮುಂಬೈ: ಬಿಗ್ ಬಾಸ್ 19ರ ಇತ್ತೀಚಿನ ಸಂಚಿಕೆಯಲ್ಲಿ ಸ್ಪರ್ಧಿ ಕುನಿಕಾ ಸದಾನಂದ್ ಅವರ ಮಗ ಅಯಾನ್ ಲಾಲ್ ಅನಿರೀಕ್ಷಿತವಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದರು. ಈ ವೇಳೆ ಕುನಿಕಾ ಮಗನನ್ನು ನೋಡಿ ಭಾವುಕರಾಗಿ ಅತ್ತರೆ, ಶೋ ನಿರೂಪಕ ಹಾಗೂ ಖ್ಯಾ ನಟ ಸಲ್ಮಾನ್ ಖಾನ್ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
ಕುನಿಕಾ ಅವರ ಪುತ್ರ ಅಯಾನ್ ಅನಿರೀಕ್ಷಿತವಾಗಿ ಪ್ರವೇಶಿಸಿ, ‘ಇಂದು ಇಡೀ ಭಾರತ ನಿಮ್ಮನ್ನು ನೋಡುತ್ತಿದೆ. ನಿಮ್ಮಿಣದಾಗಿ ನಾನು ಈ ಜಗತ್ತಿನಲ್ಲಿದ್ದೇನೆ’ ಎಂದು ತಾಯಿಗೆ ಹೇಳಿದ. ಆಗ ಕುನಿಕಾ ಅತ್ತರು. ಈ ಕ್ಷಣದಲ್ಲಿ ತಾಯಿ-ಮಗನ ಅನ್ಯೋನ್ಯತೆ ನೋಡಿ ಸಲ್ಮಾನ್ ಕೂಡ ಕಣ್ಣೀರು ಹಾಕಿದರು.==
ಪ್ರವಾಹ ಪೀಡಿತ ಪಂಜಾಬ್‌ಗೆ ನಾಳೆ ಮೋದಿ ಭೇಟಿಪಿಟಿಐ ಚಂಡೀಗಢಕಂಡುಕೇಳರಿಯರ ಪ್ರವಾಹಕ್ಕೆ ತುತ್ತಾಗಿರುವ ಪಂಜಾಬ್‌ನ ಗುರುದಾಸಪುರ ಸೆ.9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪಂಜಾಬ್ ಬಿಜೆಪಿ ಅಧ್ಯಕ್ಷ ಸುನಿಲ್ ಜಾಖಡ್, ‘ಮೋದಿ ಅವರು ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಗಮನಿಸುತ್ತಿದ್ದು, ಪಂಜಾಬ್ ಬಗ್ಗೆ ಕಾಳಜಿ ಹೊಂದಿದ್ದಾರೆ. ಸೆ.9ರಂದು ಗುರುದಾಸಪುರಕ್ಕೆ ಭೇಟಿ ನೀಡಲಿರುವ ಮೋದಿ, ರೈತರ ಪರವಾಗಿ ಕ್ರಮ ಕೈಗೊಳ್ಳಲಿದ್ದಾರೆ. ಈಗಾಗಲೇ ಕೇಂದ್ರದ 2 ತಂಡಗಳು ಪರಿಶೀಲನೆ ನಡೆಸಿದೆ. ಶೀಘ್ರವಾಗಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ’ ಎಂದು ತಿಳಿಸಿದರು.ಸೆ.4ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸಹ ಭೇಟಿ ನೀಡಿದ್ದರು.ರಾಜ್ಯದಲ್ಲಿ 46 ಜನ ಮಳೆಗೆ ಬಲಿಯಾಗಿದ್ದು, 1.75 ಲಕ್ಷ ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ.
==ಸ್ನೇಹಿತರಿಂದಲೇ 20ರ ಯುವತಿ ಮೇಲೆ ರೇಪ್
ಬಂಗಾಳದಲ್ಲಿ ಮತ್ತೊಂದು ಘಟನೆಹುಟ್ಟುಹಬ್ಬ ನೆಪದಲ್ಲಿ ಹೀನಕೃತ್ಯ
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಅತ್ಯಾಚಾರದ ಘಟನೆ ವರದಿಯಾಗಿದ್ದು ಇಲ್ಲಿನ ಹರಿದೇವಪುರ ಪ್ರದೇಶದಲ್ಲಿ, ಜನ್ಮದಿನದ ಸಂಭ್ರಮದಲ್ಲಿದ್ದ 20 ವರ್ಷದ ಯುವತಿ ಮೇಲೆ ಆಕೆಯ ಇಬ್ಬರು ಸ್ನೇಹಿತರೇ ಅತ್ಯಾಚಾರ ಎಸಗಿದ ಹೀನ ಕೃತ್ಯ ನಡೆದಿದೆ.
ಯುವತಿಯು ತನ್ನ ಸ್ನೇಹಿತರಾದ ಚಂದನ್ ಮಲಿಕ್ ಮತ್ತು ದೀಪ್ ಎಂಬುವವರ ಮೇಲೆ ಈ ಸಂಬಂಧ ದೂರು ನೀಡಿದ್ದಾಳೆ. ಇಬ್ಬರಿಗೂ ಪೊಲೀಸರು ಶೋಧ ನಡೆಸಿದ್ದಾರೆ.ಆಗಿದ್ದೇನು?ಚಂದನ್, ಯುವತಿಯನ್ನು ಆಕೆಯ ಹುಟ್ಟುಹಬ್ಬಆಚರಿಸುವ ನೆಪದಲ್ಲಿ ದೀಪ್ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಎಲ್ಲರೂ ಊಟ ಮಾಡಿದ ಬಳಿಕ ಆಕೆ ಮನೆಗೆ ಹೋಗುವುದಾಗಿ ಹೇಳಿದ್ದಾಳೆ. ಈ ವೇಳೆ ಇಬ್ಬರೂ ಅವಳನ್ನು ತಡೆದಿದ್ದು, ಬಲವಂತವಾಗಿ ಮನೆಯ ಬಾಗಿಲು ಹಾಕಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಆ ಬಳಿಕ ಯುವತಿ ತನ್ನ ಮನೆಯವರಿಗೆ ವಿಚಾರ ತಿಳಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಇಬ್ಬರೂ ಆರೋಪಿಗಳ ಪೈಕಿ ದೀಪ್ ಸರ್ಕಾರಿ ನೌಕರ ಎನ್ನಲಾಗಿದೆ.ದೂರು ದಾಖಲಾಗುತ್ತಿದ್ದಂತೆ ಇಬ್ಬರೂ ಆರೋಪಿಗಳು ನಾಪತ್ತೆಯಾಗಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಪತ್ತೆಗೆ ಬಲೆ ಬೀಸಿದ್ದಾರೆ.==
ಖ್ಯಾತ ಪಾಕಿಸ್ತಾನಿ ಗಾಯಕಿ ಬಲೋಚ್ ಮೇಲೆ ಕರಡಿ ದಾಳಿನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡುವ ವೇಳೆ ಪಾಕ್‌ನ ಖ್ಯಾತ ಗಾಯಕಿ ಖರಾತುಲೇನ್ ಬಲೋಚ್ ಅವರ ಮೇಲೆ ಕರಡಿ ದಾಳಿ ಮಾಡಿದೆ. ಇದರಿಂದಾಗಿ ಗಾಯಕಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅಪಾಯದಿಂದ ಪಾರಾಗಿದ್ದಾರೆ.ಸೆ.4ರಂದುಬಲೋಚ್ ಅವರು ತಮ್ಮ ಟೆಂಟ್‌ನಲ್ಲಿರುವಾಗ ಕರಡಿ ದಾಳಿ ಮಾಡಿದೆ. ಅದೃಷ್ಟಕ್ಕೆ ಆಸುಪಾಸಿನಲ್ಲಿದ್ದವರು, ಕರಡಿಯನ್ನು ಓಡಿಸಿದ್ದಾರೆ. ಹೀಗಾಗಿ ಅಪಾಯ ತಪ್ಪಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಅವರ ತಂಡ ಹೇಳಿದೆ.
==ಎಕ್ಸ್‌ನ ಮಸ್ಕ್ ವಿರುದ್ಧ ಟ್ರಂಪ್ ಆಪ್ತ ಆಕ್ರೋಶ
ಎಕ್ಸ್‌ನಲ್ಲಿ ರಷ್ಯಾ ತೈಲ ಖರೀದಿ ಬಗ್ಗೆ ನವಾರೋ ಪೋಸ್ಟ್ಇದು ‘ಬೂಟಾಟಿಕೆ’ ಎಂದು ಫ್ಯಾಕ್ಟ್‌ಚೆಕ್ ಮಾಡಿದ ಎಕ್ಸ್
ಮಸ್ಕ್‌ರಿಂದ ಅಪಪ್ರಚಾರ: ನವರೋ ಆಕ್ರೋಶ
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸಿ ಭಾರತ ಭಾರೀ ಲಾಭ ಮಾಡಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ನೀತಿ ಸಲಹೆಗಾರ ಪೀಟರ್ ನವರೋ ಅವರು, ಇದೀಗ ಉದ್ಯಮಿ ಎಲಾನ್ ಮಸ್ಕ್ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಭಾರತದ ವಿರುದ್ಧದ ಈ ಹೇಳಿಕೆಯನ್ನು ಎಲಾನ್ ಮಸ್ಕ್ ಅವರ ಒಡೆತನದ ಎಕ್ಸ್ ಫ್ಯಾಕ್ಚ್ ಚೆಕ್ ಮಾಡಿದ್ದನ್ನು ‘ಅಪಪ್ರಚಾರ’ ಎಂದು ಆರೋಪಿಸಿದ್ದಾರೆ.
ಆಗಿದ್ದೇನು?:‘ರಷ್ಯಾ ತೈಲ ಖರೀದಿಸಿ ಭಾರತವು ಭಾರೀ ಲಾಭ ಮಾಡಿಕೊಳ್ಳುತ್ತಿದೆ. ಈ ಮೂಲಕ ರಷ್ಯಾದ ಯುದ್ದೋನ್ಮಾದಕ್ಕೆ ನೆರವು ನೀಡುತ್ತಿದೆ. ಇದರಿಂದ ಉಕ್ರೆನ್ನಿಯರು ಮತ್ತು ರಷ್ಯನ್ನರು ಸಾವಿಗೀಡಾಗುತ್ತಿದ್ದಾರೆ. ಜತೆಗೆ, ಅಮೆರಿಕದವರು ಹೆಚ್ಚಿನ ತೆರಿಗೆ ಪಾವತಿಸಬೇಕಾಗುತ್ತಿದೆ. ಭಾರತವು ಈ ಸತ್ಯವನ್ನು ಅರಗಿಸಿಕೊಳ್ಳುತ್ತಿಲ್ಲ’ ಎಂದು ನವಾರೋ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.ಇದಾದ ಕೆಲ ಗಂಟೆಗಳಲ್ಲೇ ಈ ಪೋಸ್ಟ್‌ಗೆ ಮಸ್ಕ್ ಮಾಲೀಕತ್ವದ ‘ಎಕ್ಸ್’ನಲ್ಲಿ ರೀಡರ್ಸ್ ಆ್ಯಡೆಡ್ ಕಂಟೆಕ್ಸ್ಟ್ ಹೆಸರಲ್ಲಿ ಮಾಮೂಲಿಯಂತೆ ಟಿಪ್ಪಣಿ (ಫ್ಯಾಕ್ಟ್ ಚೆಕ್) ಹಾಕಲಾಗಿದೆ.‘ಅದರಲ್ಲಿ ಭಾರತವು ತನ್ನ ಇಂಧನ ಭದ್ರತೆಗಾಗಿ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಭಾರತ ಯಾವುದೇ ನಿರ್ಬಂಧಗಳನ್ನು ಉಲ್ಲಂಘಿಸುತ್ತಿಲ್ಲ. ಆದರೂ ಭಾರತದ ಮೇಲೆ ತೆರಿಗೆ ಹಾಕಲಾಗಿದೆ. ಆದರೆ ಅಮೆರಿಕವೇ ರಷ್ಯಾದಿಂದ ಯುರೇನಿಯಂ ಮತ್ತು ಖನಿಜಗಳನ್ನು ಖರೀದಿ ಮಾಡುತ್ತಿದೆ. ನವರೋ ಆರೋಪ ಬೂಟಾಟಿಕೆ’ ಎಂದೂ ಟಿಪ್ಪಣಿಯಲ್ಲಿ ತಿಳಿಸಲಾಗಿದೆ. ಇದೀಗ ನವರೋ ಅವರ ಆಕ್ರೋಶಕ್ಕೆ ಕಾರಣವಾಗಿದೆ.