ಸಾರಾಂಶ
ದ್ವೇಷ ಭಾಷಣ ಮಾಡಿದ ಆರೋಪದಡಿ ಮುಸ್ಲಿಂ ಧರ್ಮ ಪ್ರಚಾರಕ ಸಲ್ಮಾನ್ ಅಝಾರಿಯನ್ನು ಬಂಧಿಸಲಾಗಿದೆ.
ಜುನಾಗಢ: ದ್ವೇಷ ಭಾಷಣ ಮಾಡಿದ ಆರೋಪದಡಿ ಇಸ್ಲಾಮಿಕ್ ಬೋಧಕ ಮುಫ್ತಿ ಸಲ್ಮಾನ್ ಅಝಾರಿಯನ್ನು ಗುಜರಾತ್ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.
ಜ.31 ರ ರಾತ್ರಿ ಗುಜರಾತ್‌ನ ಜುನಾಗಢ್ ನಗರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಲ್ಮಾನ್ ‘ಇದು ನಾಯಿಗಳ ಸಮಯ, ಮುಂದೆ ನಮ್ಮ ಸಮಯ.
ಮುಸ್ಲಿಂ ಸಮುದಾಯ ಅವುಗಳ ವಿರುದ್ಧ ಹೋರಾಡಬೇಕು’ ಎಂದಿದ್ದರು.
ಈ ಕುರಿತ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಲ್ಮಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸ್ಥಳೀಯ ಆಯೋಜಕನರನ್ನು ಬಂಧಿಸಲಾಗಿತ್ತು.