ನಟ ಸಲ್ಮಾನ್‌ ಖಾನ್‌ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಗುಂಡಿಕ್ಕಿದ ಪ್ರಕರಣ ಸಂಬಂಧ ಬಂಧಿತ ಆರೋಪಿಯೊಬ್ಬ ಬುಧವಾರ ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದು ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಮುಂಬೈ: ನಟ ಸಲ್ಮಾನ್‌ ಖಾನ್‌ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಗುಂಡಿಕ್ಕಿದ ಪ್ರಕರಣ ಸಂಬಂಧ ಬಂಧಿತ ಆರೋಪಿಯೊಬ್ಬ ಬುಧವಾರ ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದು ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಆರೋಪಿ ಅನುಜ್‌ ಥಾಪನ್‌ (23) ಕ್ರೈಂ ಬ್ರಾಂಚ್‌ ಲಾಕಪ್‌ನ ಶೌಚಾಲಯದಲ್ಲಿ ಬೆಡ್‌ಶೀಟ್‌ ಮೂಲಕ ಆತ್ಮಹತ್ಯೆಗೆ ಬುಧವಾರ ಯತ್ನಿಸಿದ್ದ. ಕೂಡಲೇ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ನೀಡುತ್ತಿದ್ದ ನಡುವೆಯೇ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಮುಂಬೈನಲ್ಲಿರುವ ಆಜಾ಼ದ್‌ ಮೈದಾನ್ ಪೊಲೀಸ್‌ ಠಾಣೆಯಲ್ಲಿ ಆಕಸ್ಮಿಕ ಸಾವು ಎಂಬ ಪ್ರಕರಣ ದಾಖಲಾಗಿದೆ.

ಏನು ಪ್ರಕರಣ: ಏ.15ರ ಮುಂಜಾನೆ ಸಲ್ಮಾನ್‌ ಖಾನ್‌ ಅವರು ಮುಂಬೈನ ಬಾಂದ್ರಾದಲ್ಲಿ ವಾಸವಿರುವ ಅಪಾರ್ಟ್‌ಮೆಂಟ್‌ ಎದುರಿಗೆ ಬೈಕ್‌ನಲ್ಲಿ ಬಂದ ಬಂದೂಕುಧಾರಿಗಳಾದ ಸಾಗರ್‌ ಪಾಲ್‌ ಮತ್ತು ವಿಕಿ ಗುಪ್ತಾ, ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಬಳಿಕ ಪೊಲೀಸರು ಈಗ ಸಾವನ್ನಪ್ಪಿರುವ ಅನುಜ್‌ ಥಾಪನ್‌ ಮತ್ತು ಸೋನು ಕುಮಾರ್‌ ಬಿಷ್ಣೋಯಿ ಎಂಬುವವರನ್ನು ಶಸ್ತ್ರಾಸ್ತ್ರ ಪೂರೈಸಿರುವ ಆರೋಪದ ಮೇಲೆ ಪಂಜಾಬ್‌ನಲ್ಲಿ ಬಂಧಿಸಿದ್ದರು.