ಸಾರಾಂಶ
ಭಾರತೀಯ ಸೇನೆಯು ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನದ ಉಗ್ರರ 9 ನೆಲೆಗಳ ಹಳೆಯ ಹಾಗೂ ಹೊಸ ಸ್ಯಾಟ್‌ಲೈಟ್ ಫೋಟೋ ಬಿಡುಗಡೆಯಾಗಿವೆ. ಇದರಲ್ಲಿ ಭಯೋತ್ಪಾದಕ ತಾಣಗಳು ಹೇಗಿದ್ದವು ಹಾಗೂ ಈಗ ಹೇಗಾದವು ಎಂಬುದರ ಚಿತ್ರಣವಿದೆ.
ನವದೆಹಲಿ: ಭಾರತೀಯ ಸೇನೆಯು ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನದ ಉಗ್ರರ 9 ನೆಲೆಗಳ ಹಳೆಯ ಹಾಗೂ ಹೊಸ ಸ್ಯಾಟ್‌ಲೈಟ್ ಫೋಟೋ ಬಿಡುಗಡೆಯಾಗಿವೆ. ಇದರಲ್ಲಿ ಭಯೋತ್ಪಾದಕ ತಾಣಗಳು ಹೇಗಿದ್ದವು ಹಾಗೂ ಈಗ ಹೇಗಾದವು ಎಂಬುದರ ಚಿತ್ರಣವಿದೆ.
ಮ್ಯಾಕ್ಸರ್ ಟೆಕ್ನಾಲಜಿಸ್ ಈ ಉಪಗ್ರಹ ಚಿತ್ರವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಲಷ್ಕರ್- ಇ- ತೊಯ್ಬಾ(ಎಲ್‌ಇಟಿ), ಜೈಶ್- ಇ- ಮೊಹಮ್ಮದ್ (ಜೆಇಎಂ) ಮತ್ತು ಹಿಜ್ಬುಲ್ಲಾ ಮುಜಾಹಿದ್ದೀನ್ ಉಗ್ರ ಸಂಘಟನೆಗಳ 9 ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಆಪರೇಷನ್ ಸಿಂದೂರದ ಕ್ಷಿಪಣಿ ದಾಳಿಯಿಂದ ಹೇಗೆ ಭಯೋತ್ಪಾದಕ ನೆಲೆಗಳುಧ್ವಂಸ ಆಯಿತು ಎನ್ನುವುದರ ದೃಶ್ಯ ಪುರಾವೆಗಳನ್ನು ಬಹಿರಂಗಪಡಿಸಿದೆ.
ಈ ಚಿತ್ರದಲ್ಲಿ ಎಲ್‌ಇಟಿ ಮತ್ತು ಜೆಇಎಂ ಉಗ್ರರ ತರಬೇತಿ ಹಾನಿಗೀಡಾಗಿರುವುದು, ತರಬೇತಿ ಕೇಂದ್ರದ ಕುಸಿದ ಛಾವಣಿಗಳು, ದಾಳಿಯಿಂದ ಪರಿಣಾಮದ ಕುಳಿಗಳು ಮತ್ತು ಅವಶೇಷಗಳು ಸೆರೆಯಾಗಿದೆ.