ಆತ್ಮಹತ್ಯೆಯಿಂದ ಬಚಾವ್‌ ಆದವಗೆ ಕೋರ್ಟಿಂದ ಗಲ್ಲು

| Published : Dec 25 2024, 12:46 AM IST

ಸಾರಾಂಶ

ಆತ್ಮಹತ್ಯೆ ಯತ್ನದಿಂದ ರಕ್ಷಿಸಲ್ಬಟ್ಟಿದ್ದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದ ಅಚ್ಚರಿಯ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದಿದೆ.

ಹೂಗ್ಲಿ: ಆತ್ಮಹತ್ಯೆ ಯತ್ನದಿಂದ ರಕ್ಷಿಸಲ್ಬಟ್ಟಿದ್ದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದ ಅಚ್ಚರಿಯ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದಿದೆ.

ಏನಿದು ಪ್ರಕರಣ?: ಪ್ರಮತೇಶ್‌ (42) ಎಂಬ ಬೋಧಕ, ಮನೆಯಲ್ಲಿ ಮಕ್ಕಳಿಗೆ ಮನೆಪಾಠ ಹೇಳಿಕೊಡುವ ಕೆಲಸ ಮಾಡಿಕೊಂಡಿದ್ದ. ಆದರೆ ಕೋವಿಡ್‌ ಬಳಿಕ ಆದಾಯ ಕುಸಿತವಾಗಿತ್ತು. ಆದರೆ ಮನೆಯಲ್ಲಿ ತಂದೆ, ತಾಯಿ, ಸೋದರಿ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಆಕ್ರೋಶಗೊಂಡಿದ್ದ ಆತ 2021ರ ನ.8ರಂದು ಮೂವರನ್ನೂ ಮನೆಯಲ್ಲಿ ಹತ್ಯೆ ಮಾಡಿದ್ದ.

ಹತ್ಯೆ ನಡೆದ ದಿನ ಸಂಜೆ ಎಂದಿನಂತೆ ಮಕ್ಕಳು ಪಾಠ ಹೇಳಿಸಿಕೊಳ್ಳಲು ಬಂದಾಗ ಪ್ರಮತೇಶ್‌ ಕೈಯಿಂದ ರಕ್ತ ಸೋರುತ್ತಿದ್ದದು ಕಂಡುಬಂದಿತ್ತು. ಈ ಬಗ್ಗೆ ಮಕ್ಕಳು ನೀಡಿದ ಮಾಹಿತಿ ಮೇರೆಗೆ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಆತನ ಪ್ರಾಣ ಉಳಿಸಿದ್ದರು.

ಆದರೆ ಬಳಿಕ ಆತನ ವಿರುದ್ಧ ಕುಟುಂಬದ ಮೂವರ ಹತ್ಯೆಗೈದ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದ ತೀರ್ಪು ಇದೀಗ ಬಂದಿದ್ದು, ಇದೊಂದು ಘೋರ ಅಪರಾಧ ಎಂದು ಪರಿಗಣಿಸಿರುವ ನ್ಯಾಯಾಲಯ ಪ್ರಮತೇಶ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ.