ದೇಶಾದ್ಯಂತ ವ್ಯಾಪಾರಿಗಳ ಆಕ್ರೋಶಕ್ಕೆ ಗುರಿಯಾಗಿರುವ ಯುಪಿಐ ಪಾವತಿಗಳ ಮೇಲಿನ ಎಂಡಿಆರ್ ಶುಲ್ಕಕ್ಕೆ ತಕ್ಷಣ ತಡೆ ನೀಡಲು ನಿರಾಕರಿಸಿರುವ ಸುಪ್ರೀಂಕೋರ್ಟ್, ಶುಲ್ಕ ರದ್ದು ಕುರಿತ ಬೇಡಿಕೆಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಆರ್‌ಬಿಐ, ಎನ್‌ಪಿಸಿಐಗೆ ನೋಟಿಸ್ ನೀಡಿದೆ. ಉತ್ತರಿಸಲು 4 ವಾರ ಸಮಯ ನೀಡಿದೆ.
- ಉತ್ತರಕ್ಕೆ ಸರ್ಕಾರಕ್ಕೆ 4 ವಾರ ಸಮಯಾವಕಾಶ
- ಯುಪಿಐ ಶುಲ್ಕ ಯಾರಿಗೆ ಸೇರತ್ತೆ: ಸುಪ್ರೀಂ ಪ್ರಶ್ನೆನವದೆಹಲಿ: ದೇಶಾದ್ಯಂತ ವ್ಯಾಪಾರಿಗಳ ಆಕ್ರೋಶಕ್ಕೆ ಗುರಿಯಾಗಿರುವ ಯುಪಿಐ ಪಾವತಿಗಳ ಮೇಲಿನ ಎಂಡಿಆರ್ ಶುಲ್ಕಕ್ಕೆ ತಕ್ಷಣ ತಡೆ ನೀಡಲು ನಿರಾಕರಿಸಿರುವ ಸುಪ್ರೀಂಕೋರ್ಟ್, ಶುಲ್ಕ ರದ್ದು ಕುರಿತ ಬೇಡಿಕೆಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಆರ್‌ಬಿಐ, ಎನ್‌ಪಿಸಿಐಗೆ ನೋಟಿಸ್ ನೀಡಿದೆ. ಉತ್ತರಿಸಲು 4 ವಾರ ಸಮಯ ನೀಡಿದೆ.2 ಸಾವಿರು ರು.ಗಿಂತ ಹೆಚ್ಚು ಪಾವತಿಗಳನ್ನು ಸ್ವೀಕರಿಸುವ ವರ್ತಕರು, ಅ.15ರಿಂದ ಅದಕ್ಕೆ ಶೇ.0.04 ಶುಲ್ಕವನ್ನು ಪಾವತಿಸಬೇಕು ಎಂಬ ನಿಯಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಚಾರಣೆ ಕೈಗೆತ್ತಿಕೊಂಡ ಸಿಜೆಐ ನ್ಯಾ। ಸೂರ್ಯಕಾಂತ್, ನ್ಯಾ। ಜಯಮಾಲ್ಯ ಬಾಗ್ಚಿ ಮತ್ತು ವಿ. ಮೋಹನ್ ಅವರ ಪೀಠ, ಎಂಡಿಆರ್‌ಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿತು. ‘ಇದು ಕಾನೂನಿಗಿಂತ ತಂತ್ರಜ್ಞಾನದ ವ್ಯಾಪ್ತಿಗೆ ಒಳಪಡುವ ವಿಷಯ’ ಎಂದು ಪೀಠ ಅಭಿಪ್ರಾಯಪಟ್ಟಿತು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ಅವರು, ‘ಈ ಶುಲ್ಕದಿಂದ ಸಿಗುವ ಒಂದು ರುಪಾಯಿಯನ್ನೂ ಕೇಂದ್ರ ಸರ್ಕಾರ ತೆಗೆದುಕೊಳ್ಳುವುದಿಲ್ಲ’ ಎಂದಾಗ, ‘ಹಾಗಾದರೆ ಇದರಿಂದ ಯಾರು ಆದಾಯ ಗಳಿಸುತ್ತಾರೆ ಮತ್ತು ಆ ಹಣವನ್ನು ಹೇಗೆ ವಿತರಿಸಲಾಗುತ್ತದೆ?’ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿತು. ಅಧಿಕಾರಿಗಳಿಂದ ಉತ್ತರ ಬಂದ ಬಳಿಕ ಅಂತಿಮ ನಿರ್ಧಾರ ಪ್ರಕಟಿಸುವ ಭರವಸೆಯನ್ನೂ ನೀಡಿತು.6 ವರ್ಷಗಳಿಂದ ಅನಿಯಮಿತ ಉಚಿತ ಡಿಜಿಟಲ್ ವಹಿವಾಟುಗಳಿಗೆ ವೇದಿಕೆಯಾಗಿದ್ದ ಯುಪಿಐನಲ್ಲಿ ಅ.15ರಿಂದ ವ್ಯಾಪಾರಿಗಳಿಗೆ ಮಾಡಲಾಗುವ 2 ಸಾವಿರು ರು.ಗಿಂತ ಮೇಲ್ಪಟ್ಟ ಪಾವತಿಗಳುಗೆ ಶೇ.0.04ರಷ್ಟು ಹಾಗೂ 75 ಸಾವಿರು ರು. ಮೇಲ್ಟಟ್ಟವಕ್ಕೆ 300 ರು. ಶುಲ್ಕ ವಿಧಿಸಲಾಗಿದೆ. ಇದರಿಂದ ತಮಗೆ ನಷ್ಟವಾಗುತ್ತದೆ ಎಂಬುದು ವ್ಯಾಪಾರಿಗಳ ಅಳಲು.