ಸಾರಾಂಶ
ನವದೆಹಲಿ: ‘ಹಿಂದುಸ್ತಾನದಲ್ಲಿ ಬಹುಸಂಖ್ಯಾತರ ಇಚ್ಛೆಯಂತೆ ಕೆಲಸ ನಡೆಯುತ್ತದೆ’ ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾ। ಶೇಖರ್ ಯಾದವ್ ಅವರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ್ದು, ವಿವರಣೆ ನೀಡುವಂತೆ ಅಲಹಾಬಾದ್ ಹೈಕೋರ್ಟ್‌ಗೆ ಸೂಚನೆ ನೀಡಿದೆ.ನ್ಯಾ। ಯಾದವ್ ಅವರು ಪ್ರಯಾಗ್‌ರಾಜ್‌ನಲ್ಲಿ ನಡೆದ ವಿಎಚ್‌ಪಿ ಕಾರ್ಯಕ್ರಮದಲ್ಲಿ ಮಾನಾಡಿ ‘ಹಿಂದುಸ್ತಾನವು ಬಹುಸಂಖ್ಯಾತರ ಇಚ್ಛೆಯಂತೆ ಕೆಲಸ ಮಾಡುತ್ತದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಕಾನೂನು ವಾಸ್ತವವಾಗಿ ಬಹುಸಂಖ್ಯಾತರ ಅಭಿಪ್ರಾಯದಂತೆ ಕೆಲಸ ಮಾಡುತ್ತದೆ. ಏಕರೂಪ ನಾಗರಿಕ ಸಂಹಿತೆಯು ಒಂದು ಕೋಮಿನ ಸಾಮಾಜಿಕ ಪಿಡುಗುಗಳಿಗೆ ಪರಿಹಾರ’ ಎಂದಿದ್ದರು ಎಂದು ವರದಿಯಾಗಿತ್ತು,
ಈ ವರದಿಗಳನ್ನು ಪತ್ರಿಕೆಯಲ್ಲಿ ಗಮನಿಸಿದ ಸುಪ್ರಿಂ ಕೋರ್ಟ್ ಅಲಹಾಬಾದ್ ಹೈಕೋರ್ಟ್‌ನಿಂದ ವಿವರಣೆಯನ್ನು ಕೇಳಿದೆ.ವಾಗ್ದಂಡನೆ ನಿಲುವಳಿಗೆ ಸಿದ್ಧತೆ:
ಈ ನಡುವೆ ವಿಪಕ್ಷ ಸಂಸದ ಕಪಿಲ್ ಸಿಬಲ್ ಹಾಗೂ ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಸಂಸದ ಅಗಾ ಸೈಯದ್ ರುಹುಲ್ಲಾ ಮೆಹದಿ ಅವರು ನ್ಯಾ। ಬ್ಯಾನರ್ಜಿ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಮಂಡಿಸಲು ಸಿದ್ಧತೆ ಆರಂಭಿಸಿದ್ದಾರೆ. ಇದಕ್ಕೆ ಅವರಿಗೆ 100 ಸಂಸದರ ಸಹಿ ಬೇಕು.==
ಕ್ಯುಎಸ್ ರ್‍ಯಾಂಕಿಂಗ್: ಬೆಂಗಳೂರು ಐಐಎಸ್ಸಿ ನಂ.1ನವದೆಹಲಿ: ಕ್ಯುಎಸ್ ವಿಶ್ವವಿದ್ಯಾಲಯ ಜಾಗತಿಕ ರ್‍ಯಾಂಕಿಂಗ್ ಪ್ರಕಟವಾಗಿದ್ದು, ಪರಿಸರ ಶಿಕ್ಷಣದಲ್ಲಿ ಬೆಂಗಳೂರು ಐಐಎಸ್ಸಿ ಭಾರತದ ನಂ.1 ಎನ್ನಿಸಿಕೊಂಡಿದೆ ಹಾಗೂ ವಿಶ್ವದ ಟಾಪ್ 50 ವಿವಿಗಳಲ್ಲಿ ಸ್ಥಾನ ಪಡೆದಿದೆ.ಇನ್ನು ಸುಸ್ಥಿರ ಶಿಕ್ಷಣದಲ್ಲಿ ಕಳೆದ ಸಲಕ್ಕಿಂತ 255 ಸ್ಥಾನ ಜಿಗಿದಿರುವ ದೆಹಲಿ-ಐಐಟಿ, ಭಾರತದ ನಂ.1 ಸ್ಥಾನ ಪಡೆದಿದೆ ಹಾಗೂ ವಿಶ್ವದಲ್ಲಿ 171ನೇ ಸ್ಥಾನ ಪಡೆದುಕೊಂಡಿದೆ. ವಿಶ್ವದ ಸುಸ್ಥಿರ ವಿವಿ ಶ್ರೇಯಾಂಕದಲ್ಲಿ ಭಾರತದ 78 ವಿವಿಗಳಿವೆ ಹಾಗೂ ಕೆನಡಾಡ ದೊರಂಟೋ ವಿವಿ, ವಿಶ್ವದ ನಂ.1 ಎನ್ನಿಸಿಕೊಂಡಿದೆ.
ಇದೇ ವೇಳೆ, ಪರಿಸರ ಪರಿಣಾಮ ವಿಭಾಗದಲ್ಲಿ ದಿಲ್ಲಿ ಐಐಟಿ ಹಾಗೂ ಕಾನ್ಪುರ ಐಐಟಿ ವಿಶ್ವದ ಟಾಪ್-100 ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ಥಾನ ಗಿಟ್ಟಿಸಿವೆ.ಈ ಸಲ 196 ದೇಶಗಳ 1740 ವಿವಿಗಳ ಸಾಧನೆ ಅಳೆದು ಈ ಪಟ್ಟಿ ಸಿದ್ಧಪಡಿಸಲಾಗಿದೆ.