ಅದಾನಿ ವಿರುದ್ಧ ಅಕ್ರಮದ ಆರೋಪ ಮಾಡಿದ್ದ ಹಿಂಡನ್‌ಬರ್ಗ್‌ಗೆ ನೋಟಿಸ್‌

| Published : Jul 03 2024, 12:22 AM IST

ಅದಾನಿ ವಿರುದ್ಧ ಅಕ್ರಮದ ಆರೋಪ ಮಾಡಿದ್ದ ಹಿಂಡನ್‌ಬರ್ಗ್‌ಗೆ ನೋಟಿಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹ ಭಾರೀ ಗೋಲ್‌ಮಾಲ್‌ ನಡೆಸಿದೆ ಎಂದು ಆರೋಪ ಮಾಡಿದ್ದ ಅಮೆರಿಕ ಮೂಲದ ಹಿಂಡನ್‌ಬರ್ಗ್‌ ಸಂಸ್ಥೆ ವಿರುದ್ಧ ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆ ‘ಸೆಬಿ’ ನೋಟಿಸ್‌ ಜಾರಿ ಮಾಡಿದೆ.

ನವದೆಹಲಿ: ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹ ಭಾರೀ ಗೋಲ್‌ಮಾಲ್‌ ನಡೆಸಿದೆ ಎಂದು ಆರೋಪ ಮಾಡಿದ್ದ ಅಮೆರಿಕ ಮೂಲದ ಹಿಂಡನ್‌ಬರ್ಗ್‌ ಸಂಸ್ಥೆ ವಿರುದ್ಧ ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆ ‘ಸೆಬಿ’ ನೋಟಿಸ್‌ ಜಾರಿ ಮಾಡಿದೆ.ಅದಾನಿ ವಿರುದ್ಧ ಆರೋಪ ಮಾಡಿದ ವೇಳೆ ಶಾರ್ಟ್‌ ಸೆಲ್ಲಿಂಗ್‌ ನಡೆಸುವ ಮೂಲಕ ಷೇರುಬೆಲೆ ತಿರುಚಿದ ಆರೋಪದ ಕಾರಣಕ್ಕಾಗಿ ಸೆಬಿ ಈ ನೋಟಿಸ್‌ ಜಾರಿ ಮಾಡಿದೆ.ಆದರೆ, ‘ಸೆಬಿ ನೋಟಿಸ್‌ ಅಸಂಬದ್ಧ’ ಎಂದು ಕಿಡಿಕಾರಿರುವ ಹಿಂಡನ್‌ಬರ್ಗ್‌ ಸಂಸ್ಥೆ, ‘ಭಾರತದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳ ಅಕ್ರಮ ಬಯಲಿಗೆಳೆದಿದ್ದಕ್ಕೆ ನೋಟಿಸ್‌ ನೀಡಿ ನಮ್ಮನ್ನು ಹೆದರಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಕಿಡಿಕಾರಿದೆ.ಇದೇ ವೇಳೆ, ‘ಭಾರತದ ಕೋಟಕ್‌ ಬ್ಯಾಂಕ್‌, ಇಂಥ ಹೂಡಿಕೆ ಮಾಡಲೆಂದೇ ವಿದೇಶದಲ್ಲಿ ಹೂಡಿಕೆ ವಿಭಾಗವೊಂದನ್ನು ತೆರೆದಿದೆ. ಅದರ ಮೂಲಕವೇ ನಾವು ಅದಾನಿ ಕಂಪನಿಯ ಷೇರುಗಳನ್ನು ಶಾರ್ಟ್‌ ಮಾಡಿದ್ದು’ ಎಂದು ಹಿಂಡನ್‌ಬರ್ಗ್‌ ಹೇಳಿದೆ. ಆದರೆ ಈ ಆರೋಪವನ್ನು ಕೋಟಕ್‌ ಸ್ಪಷ್ಟವಾಗಿ ತಳ್ಳಿಹಾಕಿದೆ ಹಾಗೂ ಹಿಂಡನ್‌ಬರ್ಗ್‌ ಜತೆ ನಾವು ಯಾವುದೇ ನಂಟು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.