ಎಚ್‌ಎಂಪಿವಿ ವೈರಸ್‌ ಸೋಮವಾರ ಬಾಂಬೆ ಷೇರುಪೇಟೆಯ ಮೇಲೂ ‘ದಾಳಿ’ : 1258 ಅಂಕ ಭಾರೀ ಕುಸಿತ

| Published : Jan 07 2025, 12:16 AM IST / Updated: Jan 07 2025, 04:46 AM IST

ಸಾರಾಂಶ

 ಚೀನಾದಲ್ಲಿ ವ್ಯಾಪಕವಾಗಿ, ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಎಚ್‌ಎಂಪಿವಿ ವೈರಸ್‌ ಸೋಮವಾರ ಬಾಂಬೆ ಷೇರುಪೇಟೆಯ ಮೇಲೂ ‘ದಾಳಿ’ ನಡೆಸಿದೆ.

ಮುಂಬೈ: ಚೀನಾದಲ್ಲಿ ವ್ಯಾಪಕವಾಗಿ, ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಎಚ್‌ಎಂಪಿವಿ ವೈರಸ್‌ ಸೋಮವಾರ ಬಾಂಬೆ ಷೇರುಪೇಟೆಯ ಮೇಲೂ ‘ದಾಳಿ’ ನಡೆಸಿದೆ. ಭಾರತದಲ್ಲೂ ಸೋಂಕು ಪತ್ತೆ ಸುದ್ದಿ ಸೋಮವಾರ ಷೇರುಪೇಟೆಯ ಮೇಲೆ ಭಾರೀ ಪರಿಣಾಮ ಭೀರಿದೆ.

ಬಾಂಬೆ ಷೇರುಪೇಟೆ ‘ಸೆನ್ಸೆಕ್ಸ್’ 1258 ಅಂಕಗಳ ಭಾರೀ ಕುಸಿತ ಕಂಡು 77964 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದೇ ವೇಳೆ ನಿಫ್ಟಿ ಕೂಡಾ 388 ಅಂಕ ಕುಸಿತ ಕಂಡು 23616 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದರಿಂದ ಹೂಡಿಕೆದಾರರ ಸಂಪತ್ತು 10.98 ಲಕ್ಷ ಕೋಟಿ ರು.ನಷ್ಟು ಕರಗಿ ಹೋಗಿದೆ.

ಇನ್ನು ಡಾಲರ್‌ ಎದುರು ರುಪಾಯಿ ದರ ಕೂಡ 4 ಪೈಸೆ ಇಳಿದು, ಸಾರ್ವಕಾಲಿಕ ಕನಿಷ್ಠವಾದ 85.83 ರು.ಗೆ ಇಳಿದಿದೆ.ಇಳಿಕೆಗೆ ಕಾರಣವೇನು?:

ಸೋಂಕು ವ್ಯಾಪಕವಾದರೆ ಆರ್ಥಿಕತೆ ಮೇಲೆ ಉಂಟಾಗಬಹುದಾದ ವ್ಯತಿರಿಕ್ತ ಪರಿಣಾಮವು ಹೂಡಿಕೆದಾರಲ್ಲಿ ಭಾರೀ ಕಳವಳ ಹುಟ್ಟುಹಾಕಿದ ಕಾರಣ ಷೇರುಪೇಟೆ ಭಾರೀ ಕುಸಿತ ಕಂಡಿದೆ.ಇದರ ಜೊತೆಗೆ ಜ.20ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಿ ಪ್ರಮಾಣ ವಚನದ ಬಳಿಕ ವೀಸಾ ಕುರಿತು ಕೈಗೊಳ್ಳಬಹುದಾದ ಕಠಿಣ ನಿರ್ಧಾರಗಳು, ವಿದೇಶಿ ಸಾಂಸ್ಥಿಕೆ ಹೂಡಿಕೆದಾರರ ಭಾರೀ ಪ್ರಮಾಣದಲ್ಲಿ ಹಣ ಹಿಂಪಡೆದಿದ್ದು ಕೂಡಾ ಷೇರುಪೇಟೆ ಇಳಿಕೆಗೆ ಕಾರಣವಾದವು.