ಸಾರಾಂಶ
ಭಾರತೀಯ ಷೇರುಪೇಟೆ ಬಜೆಟ್ ಬಗ್ಗೆ ನೀರಸವಾಗಿ ಪ್ರತಿಕ್ರಿಯಿಸಿದೆ. ಹೂಡಿಕೆದಾರರಿಗೆ ಬಜೆಟ್‌ನಲ್ಲಿ ಯಾವುದೇ ಪೂರಕ ಅಂಶ ಕಂಡುಬರದ ಕಾರಣ ಷೇರುಪೇಟೆ ಭಾರೀ ಕುಸಿತದ ಭೀತಿಗೆ ತುತ್ತಾಗಿದ್ದರೂ, 12 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ ಎಂಬ ಸಮಾಧಾನಕರ ಅಂಶ ಷೇರುಪೇಟೆಯ ಭಾರೀ ಕುಸಿತವನ್ನು ತಡೆದಿದೆ.
ಮುಂಬೈ: ಭಾರತೀಯ ಷೇರುಪೇಟೆ ಶನಿವಾರ ಮಂಡನೆಯಾದ ಬಜೆಟ್ ಬಗ್ಗೆ ನೀರಸವಾಗಿ ಪ್ರತಿಕ್ರಿಯಿಸಿದೆ. ಹೂಡಿಕೆದಾರರಿಗೆ ಬಜೆಟ್‌ನಲ್ಲಿ ಯಾವುದೇ ಪೂರಕ ಅಂಶ ಕಂಡುಬರದ ಕಾರಣ ಷೇರುಪೇಟೆ ಭಾರೀ ಕುಸಿತದ ಭೀತಿಗೆ ತುತ್ತಾಗಿದ್ದರೂ, 12 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ ಎಂಬ ಸಮಾಧಾನಕರ ಅಂಶ ಷೇರುಪೇಟೆಯ ಭಾರೀ ಕುಸಿತವನ್ನು ತಡೆದಿದೆ.
ಬಜೆಟ್ ಮಂಡನೆ ಹೊತ್ತಿನಲ್ಲಿ ಭಾರೀ ಏರಿಳಿಕೆ ಕಂಡ ಹೊರತಾಗಿಯೂ ದಿನದಂತ್ಯಕ್ಕೆ ಸೆನ್ಸೆಕ್ಸ್ ಕೇವಲ 6 ಅಂಕ ಏರಿಕೆ ಕಂಡು 77505 ಅಂಕಗಳಲ್ಲಿ ಮುಕ್ತಾಯವಾದರೆ ನಿಫ್ಟಿ 26 ಅಂಕ ಕುಸಿದು 23482 ಅಂಕಗಳಲ್ಲಿ ಕೊನೆಗೊಂಡಿತು.