ಸಾರಾಂಶ
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಬುಧವಾರ ಭರ್ಜರಿ ಕುಸಿತ ಕಂಡಿವೆ. ಸೆನ್ಸೆಕ್ಸ್ 900 ಅಂಕ ಕುಸಿತ ಕಂಡು, 72,761.89ಕ್ಕೆ ಪತನಗೊಂಡಿದೆ. ಇದರಿಂದಾಗಿ ಹೂಡಿಕೆದಾರರಿಗೆ 14 ಲಕ್ಷ ಕೋಟಿ ರು. ನಷ್ಟವಾಗಿದೆ.
ಮುಂಬೈ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಬುಧವಾರ ಭರ್ಜರಿ ಕುಸಿತ ಕಂಡಿವೆ. ಸೆನ್ಸೆಕ್ಸ್ 900 ಅಂಕ ಕುಸಿತ ಕಂಡು, 72,761.89ಕ್ಕೆ ಪತನಗೊಂಡಿದೆ. ಇದರಿಂದಾಗಿ ಹೂಡಿಕೆದಾರರಿಗೆ 14 ಲಕ್ಷ ಕೋಟಿ ರು. ನಷ್ಟವಾಗಿದೆ.
ಇನ್ನು ಮಾರುಕಟ್ಟೆ ರಾಷ್ಟ್ರೀಯ ಸಂವೇದಿ ಸೂಚ್ಯಂಕ (ನಿಫ್ಟಿ) 338 ಅಂಕ ಕುಸಿದು 21,997.70ಕ್ಕೆ ತಲುಪಿತು.ಮಂಗಳವಾರ ಏರಿಕೆ ಹಾದಿಯಲ್ಲಿದ್ದ ಭಾರತೀಯ ಷೇರು ಮಾರುಕಟ್ಟು ಬುಧವಾರ ಬೆಳಗ್ಗೆ ವ್ಯವಹಾರ ಆರಂಭವಾದ ಮೇಲೆ ಲಾಭದಲ್ಲಿಯೇ ನಡೆಯುತ್ತಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡಿದ ಮೇಲೆ, ಮಧ್ಯಾಹ್ನದ ಅವಧಿಯಲ್ಲಿ ಇಂಧನ, ಸ್ಟೀಲ್ ಹಾಗೂ ದಿನಬಳಕೆ ವಸ್ತುಗಳ ಷೇರುಗಳನ್ನು ಮಾರುವವರು ಹೆಚ್ಚಾದ ಕಾರಣ ಕುಸಿದಿದೆ.ಸೆನ್ಸೆಕ್ಸ್‌ನಲ್ಲಿ ಪ್ರಮುಖವಾಗಿ ಎನ್‌ಟಿಪಿಸಿ, ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಜೆಎಸ್‌ಡಬ್ಲ್ಯು, ಸ್ಟೀಲ್, ಭಾರ್ತಿ ಏರ್‌ಟಲ್ ನಷ್ಟದಲ್ಲಿ ಮುಕ್ತಾಯಗೊಂಡವು. ಇನ್ನು ಐಟಿಸಿ, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ನೆಸ್ಲೆ ಲಾಭದಲ್ಲಿ ಮುಕ್ತಾಯಗೊಂಡವು.
ವಿಶ್ವ ಮಾರುಕಟ್ಟೆಯಲ್ಲಿ ಸೋಲ್ ಲಾಭ ಕಂಡರೆ, ಟೋಕಿಯೋ, ಶಾಂಘೈ ಹಾಗೂ ಹಾಂಗ್‌ಕಾಂಗ್ ನಷ್ಟದಲ್ಲಿತ್ತು. ಅಮೆರಿಕ ಹಾಗೂ ಐರೋಪ್ಯ ಮಾರುಕಟ್ಟೆ ಲಾಭದಲ್ಲಿತ್ತು.