ದೇಶದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಮುಂಗಾರು ಮಳೆ ತನ್ನ ಅಬ್ಬರ ಮುಂದುವರಿಸಿದ್ದು ಮಳೆ ಸಂಬಂಧಿ ಘಟನೆಗಳಿಗೆ ಒಂದೇ ದಿನ 17 ಜನರು ಬಲಿಯಾಗಿದ್ದಾರೆ.ಜಮ್ಮು ಕಾಶ್ಮೀರದ ಗಡಿಜಿಲ್ಲೆಗಳಾದ ಪೂಂಚ್ ಮತ್ತು ರಜೌರಿಯಲ್ಲಿ ಭಾನುವಾರ ಮೇಘಸ್ಫೋಟ ಸಂಭವಿಸಿದ ಪರಿಣಾಮ ಸೃಷ್ಟಿಯಾಗಿರುವ ದಿಢೀರ್ ಪ್ರವಾಹ ಮತ್ತು ಸಂಭವಿಸುತ್ತಿರುವ ಭೂಕುಸಿತಕ್ಕೆ ಸಿಲುಕಿ 11 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಜಮ್ಮು/ನವದೆಹಲಿ: ದೇಶದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಮುಂಗಾರು ಮಳೆ ತನ್ನ ಅಬ್ಬರ ಮುಂದುವರಿಸಿದ್ದು ಮಳೆ ಸಂಬಂಧಿ ಘಟನೆಗಳಿಗೆ ಒಂದೇ ದಿನ 17 ಜನರು ಬಲಿಯಾಗಿದ್ದಾರೆ.
ಪೂಂಚ್ ಮತ್ತು ರಜೌರಿಯಲ್ಲಿ ಭಾನುವಾರ ಮೇಘಸ್ಫೋಟ
ಜಮ್ಮು ಕಾಶ್ಮೀರದ ಗಡಿಜಿಲ್ಲೆಗಳಾದ ಪೂಂಚ್ ಮತ್ತು ರಜೌರಿಯಲ್ಲಿ ಭಾನುವಾರ ಮೇಘಸ್ಫೋಟ ಸಂಭವಿಸಿದ ಪರಿಣಾಮ ಸೃಷ್ಟಿಯಾಗಿರುವ ದಿಢೀರ್ ಪ್ರವಾಹ ಮತ್ತು ಸಂಭವಿಸುತ್ತಿರುವ ಭೂಕುಸಿತಕ್ಕೆ ಸಿಲುಕಿ 11 ಜನ ಪ್ರಾಣ ಕಳೆದುಕೊಂಡಿದ್ದಾರೆ. 7 ಮಂದಿ ಕಾಣೆಯಾಗಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
ಸಿಎಂ ಒಮರ್ ಅಬ್ದುಲ್ಲಾ ಪರಿಸ್ಥಿತಿಯ ಪರಿಶೀಲನೆ
ಸಿಎಂ ಒಮರ್ ಅಬ್ದುಲ್ಲಾ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದು, ಪ್ರವಾಹಪೀಡಿತ ಪ್ರದೇಶಗಳ ಶಾಸಕರ ಜತೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ. ಅತ್ತ ಲೆ.ಜ. ಮನೋಜ್ ಸಿನ್ಹಾ ಕೂಡ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಇವರಿಬ್ಬರನ್ನು ಸಂಪರ್ಕಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಳೆಯಿಂದಾಗಿರುವ ಹಾನಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಅತ್ತ ಉತ್ತರಾಖಂಡದ ಹರಿದ್ವಾರದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ನಾಗಾಲ್ಯಾಂಡ್‌ನ ಮೊನ್ ಎಂಬಲ್ಲಿ ಹಠಾತ್ ಪ್ರವಾಹದಿಂದ ಭಾರೀ ಭೂಕುಸಿತ ಸಂಭವಿಸಿದ್ದು, 4 ಜನರನ್ನು ಬಲಿ ಪಡೆದಿದೆ.