ಶಾಜಹಾನ್‌ ಶೇಖ್‌ ಮೇಲೆ ಮತ್ತೆ ಇ.ಡಿ. ದಾಳಿ

| Published : Feb 24 2024, 02:34 AM IST

ಸಾರಾಂಶ

ಸಂದೇಶ್‌ಖಾಲಿ ಭೂಕಬಳಿಕೆ ಪ್ರಕರಣದಲ್ಲಿ ಟಿಎಂಸಿ ವಿವಾದಿತ ನಾಯಕ ಸಂದೇಶ್‌ ಖಾಲಿ ಮೇಲೆ ಜಾರಿ ನಿರ್ದೇಶನಾಲಯ ರೇಡ್‌ ಮಾಡಿದೆ.

ಕೋಲ್ಕತಾ: ಪ.ಬಂಗಾಳದ ಸಂದೇಶ್‌ಖಾಲಿ ಭೂಕಬಳಿಕೆ ಪ್ರಮುಖ ಆರೋಪಿ, ತಲೆಮರೆಸಿಕೊಂಡಿರುವ ಟಿಎಂಸಿ ನಾಯಕ ಶಾಜಹಾನ್‌ ಶೇಖ್‌ ಹಾಗೂ ಆತನ ಸಹಚರರಿಗೆ ಸೇರಿದ ಆಸ್ತಿಗಳ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದೆ.

ಭೂ ಕಬಳಿಕೆಗೆ ಸಂಬಂಧಿಸಿದಂತೆ ಹಳೆಯ ಪ್ರಕರಣವೊಂದರ ಸಂಬಂಧ ದಾಳಿ ನಡೆಸಲಾಗಿದ್ದು, ದಾಖಲಾತಿಗಳಿಗಾಗಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೌರಾ, ಬಿಜೋಯ್‌ ಗರ್‌ ಮತ್ತು ಬಿರಾತಿ ನಗರಗಳಲ್ಲಿನ 5ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಶಾಜಹಾನ್‌ ಮತ್ತು ಆತನ ಮೀನು ಉದ್ಯಮದಲ್ಲಿ ಪಾಲುದಾರರಾದ ಇತತರ ಮೇಲೆ ಇ.ಡಿ. ದಾಳಿ ನಡೆಸಿದೆ. ದಾಳಿಯ ಸಮಯದಲ್ಲಿ ಕೇಂದ್ರೀಯ ಭದ್ರತಾ ಪಡೆ ಇ.ಡಿ. ಅಧಿಕಾರಿಗಳಿಗೆ ಭದ್ರತೆ ಒದಗಿಸಿದೆ. ದಾಳಿಗೆ ಒಳಗಾದವರಲ್ಲಿ ಹಲವರು ರಫ್ತು ಉದ್ಯಮದಲ್ಲೂ ತೊಡಗಿಕೊಂಡಿದ್ದು, ಯಾವ ರೀತಿಯ ವ್ಯವಹಾರ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಜಹಾನ್‌ಗೆ ಇ.ಡಿ. 4 ಬಾರಿ ಸಮನ್ಸ್‌ ಜಾರಿ ಮಾಡಿದ್ದು, ಆತ ವಿಚಾರಣೆಗೆ ಹಾಜರಾಗಿಲ್ಲ.