ಪ್ರಜ್ವಲ್‌ ಹಗರಣವೇ ಇನ್ನು ಎಲೆಕ್ಷನ್‌ ವಿಷಯ, ಬಿಜೆಪಿಗೆ ಭಾರೀ ಕಷ್ಟ ಇದೆ: ತರೂರ್‌

| Published : May 03 2024, 01:08 AM IST / Updated: May 03 2024, 05:33 AM IST

ಪ್ರಜ್ವಲ್‌ ಹಗರಣವೇ ಇನ್ನು ಎಲೆಕ್ಷನ್‌ ವಿಷಯ, ಬಿಜೆಪಿಗೆ ಭಾರೀ ಕಷ್ಟ ಇದೆ: ತರೂರ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜ್ವಲ್‌ ರೇವಣ್ಣ ಹಗರಣವೇ ಚುನಾವಣೆಯ ಮುಂದಿನ ಪ್ರಮುಖ ವಿಷಯವಾಗಲಿದ್ದು, ಬಿಜೆಪಿಗೆ ಭಾರೀ ಕಷ್ಟವಾಗಲಿದೆ ಎಂದು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ತಿಳಿಸಿದ್ದಾರೆ.

ನವದೆಹಲಿ: ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಆರೋಪಿಯಾಗಿರುವ ಲೈಂಗಿಕ ಕಿರುಕುಳ ಹಗರಣ ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.

ಇದು ಬಿಜೆಪಿಗೆ ಅಡ್ಡಪರಿಣಾಮವಾಗುವ ಸಾಧ್ಯತೆ ಇದೆ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಬಿಜೆಪಿ ನಾಯಕರು ಪ್ರಚಾರ ಮಾಡಿದ್ದಾರೆ.

ಸಜ್ಜನರ ಪರ ಎನ್ನುವ ಬಿಜೆಪಿಯವರು ಆರೋಪಿ ಪರ ಪ್ರಚಾರ ಮಾಡಿದ್ದಾರೆ.

ಇದರಿಂದ ಮುಂದಿನ 5 ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.