ವೈರತ್ವ ಮರೆತು ಫಡ್ನವೀಸ್‌-ಉದ್ಧವ್‌ ಭೇಟಿ, ಕುಶಲೋಪರಿ

| Published : Dec 18 2024, 12:45 AM IST

ಸಾರಾಂಶ

ರಾಜಕೀಯ ವೈರತ್ವದ ಹೊರತಾಗಿಯೂ ಶಿವಸೇನೆ (ಉದ್ಧವ್‌) ಬಣದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ನಾಗಪುರ: ರಾಜಕೀಯ ವೈರತ್ವದ ಹೊರತಾಗಿಯೂ ಶಿವಸೇನೆ (ಉದ್ಧವ್‌) ಬಣದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಚಳಿಗಾಲದ ಅಧಿವೇಶನದ ನಿಮಿತ್ತ ನಾಗಪುರಕ್ಕೆ ಬಂದಿದ್ದ ಫಡ್ನವೀಸ್‌ ಅವರನ್ನು ಉದ್ಧವ್‌ ಖುದ್ದು ಸಿಎಂ ಕೊಠಡಿಯಲ್ಲಿಯೇ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಸೇನೆ ಶಾಸಕ ಆದಿತ್ಯ ಠಾಕ್ರೆ, ಅನಿಲ್‌ ಪರಬ್‌, ವರುಣ್‌ ಸರದೇಸಾಯಿ ಸಹ ಇದ್ದರು.

2019ರವರೆಗೆ ಬಿಜೆಪಿ ಜತೆ ಒಟ್ಟಿಗೆ ಇದ್ದ ಶಿವಸೇನೆ, ಬಿಜೆಪಿಯು ಮುಖ್ಯಮಂತ್ರಿ ನೀಡದ ಕಾರಣ ಮೈತ್ರಿ ಮುರಿದುಕೊಂಡು ಕಾಂಗ್ರೆಸ್‌ ಜೊತೆ ಕೈಜೋಡಿಸಿತ್ತು. ಬಳಿಕ ಶಿವಸೇನೆ ಇಬ್ಭಾಗವಾಗಿತ್ತು.

ವಿವಾದಿತ ಹೇಳಿಕೆ: ಸುಪ್ರೀಂ ಕೊಲಿಜಿಯಂ ಎದುರು ಜಡ್ಜ್‌ ಹಾಜರುನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ದಿಷ್ಟ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಅಲಹಾಬಾದ್‌ ಹೈಕೋರ್ಟ್‌ ನ್ಯಾ। ಶೇಖರ್ ಕುಮಾರ್‌ ಯಾದವ್‌ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಪೀಠದ ಎದುರು ವಿಚಾರಣೆಗೆ ಹಾಜರಾದರು. ಮೂಲಗಳ ಪ್ರಕಾರ, ಮಂಗಳವಾರ ಯಾದವ್ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ। ಸಂಜೀವ್‌ ಖನ್ನಾ ಎದುರು ವಿಚಾರಣೆಗೆ ಹಾಜರಾಗಿ ಹೇಳಿಕೆಯನ್ನು ದಾಖಲಿಸಿದರು. ಪ್ರಯಾಗ್‌ರಾಜ್‌ನಲ್ಲಿ ಡಿ.8ರಂದು ನಡೆದ ಕಾರ್ಯಕ್ರಮದಲ್ಲಿ ನ್ಯಾ।ಶೇಖರ್ ಕುಮಾರ್‌ ಯಾದವ್‌ ಅವರು ಒಂದು ನಿರ್ದಿಷ್ಟ ಧರ್ಮದ ಆಚರಣೆ ಟೀಕಿಸಿದ್ದರು ಹಾಗೂ ‘ಹಿಂದುಸ್ತಾನದಲ್ಲಿ ಬಹುಸಂಖ್ಯಾತರ ಇಚ್ಛೆಯಂತೆ ಕೆಲಸ ನಡೆಯುತ್ತದೆ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.

ನಾನೇನು ಕೈಗೊಂಬೆಯೇ?: ಅಜಿತ್‌, ಪ್ರಫುಲ್‌ ವಿರುದ್ಧ ಭುಜಬಲ್‌ ವಾಗ್ದಾಳಿನಾಸಿಕ್: ಇತ್ತೀಚೆಗಿನ ಮಹಾರಾಷ್ಟ್ರ ಸಂಪುಟ ವಿಸ್ತರಣೆಯಲ್ಲಿ ತಮ್ಮನ್ನು ಹೊರಗಿಟ್ಟಿರುವ ಬಗ್ಗೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿರುವ ಎನ್‌ಸಿಪಿ ಹಿರಿಯ ಶಾಸಕ ಛಗನ್ ಭುಜಬಲ್ ಮಂಗಳವಾರ ಪಕ್ಷದ ಅಧ್ಯಕ್ಷ ಮತ್ತು ಡಿಸಿಎಂ ಅಜಿತ್ ಪವಾರ್ ಮತ್ತು ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ನಾನೇನು ನಿಮ್ಮ ಕೈಯಲ್ಲಿನ ಗೊಂಬೆಯೇ?’ ಎಂದು ಪ್ರಶ್ನಿಸಿದ್ದಾರೆ.ಸಚಿವ ಸ್ಥಾನ ಸಿಗದೆ ಬೇಸರಗೊಂಡಿರುವ ಭುಜಬಲ್ ಅವರು ನಡೆಯುತ್ತಿರುವ ಸದನದ ಚಳಿಗಾಲದ ಅಧಿವೇಶನವನ್ನು ಬಿಟ್ಟು ಮಂಗಳವಾರ ನಾಸಿಕ್ ತಲುಪಿದರು. ಅಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನನ್ನನ್ನು ಸಚಿವ ಮಾಡುವುದಾಗಿ ಹೇಳಿದ್ದರು. ಆದರೆ ಇದನ್ನು ತಡೆದವರು ಯಾರು ಎಂದು ಕಂಡುಹಿಡಿಯುವೆ’ ಎಂದು ಘೋಷಿಸಿದರು.

ಭವಿಷ್ಯದ ಕ್ರಮದ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವುದಾಗಿಯೂ ಅವರು ಹೇಳಿದರು.

ಅಲ್ಲು ಜಾಮೀನು ವಿರುದ್ಧ ತೆಲಂಗಾಣ ಪೊಲೀಸ್ ಸುಪ್ರೀಂಗೆ?

ಹೈದರಾಬಾದ್: ಪುಷ್ಪ-2 ಸಿನಿಮಾ ವೀಕ್ಷಣೆ ವೇಳೆ ಅಭಿಮಾನಿಯೊಬ್ಬರ ಸಾವು ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ನೇಕೆ ಹೊರಬಂದಿರುವ ನಟ ಅಲ್ಲು ಅರ್ಜುನ್ ವಿರುದ್ಧ ತೆಲಂಗಾಣ ಪೊಲೀಸರು ಸುಪ್ರೀಂ ಕೋರ್ಟಿಗೆ, ಜಾಮೀನು ರದ್ದತಿಗೆ ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.ಅಭಿಮಾನಿ ಸಾವು ಪ್ರಕರಣದಲ್ಲಿ ಅಲ್ಲು ಅರ್ಜುನ್‌ರನ್ನು ಡಿ.13 ರಂದು ಬಂಧಿಸಿ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿತ್ತು.

ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ಪುಷ್ಪಾ 2 ಚಲನಚಿತ್ರ ಪ್ರದರ್ಶನಕ್ಕೆ ನಟ ಅಲ್ಲು ಅರ್ಜುನ್‌ ಆಗಮಿಸಿದ್ದ ವೇಳೆ ಅವರನ್ನು ನೋಡಲು ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟಿದ್ದರು.

ಪಾಕ್‌ ಶರಣಾಗತಿಯ ಚಿತ್ರ ತೆಗೆದಿಲ್ಲ, ಸೂಕ್ತ ಜಾಗದಲ್ಲಿ ಇಟ್ಟಿದ್ದೇವೆ: ಸೇನೆ ಸ್ಪಷ್ಟನೆನವದೆಹಲಿ: 1971 ಬಾಂಗ್ಲಾ ವಿಮೋಚನಾ ಯುದ್ಧದ ವೇಳೆ ಭಾರತದ ಮುಂದೆ ಪಾಕಿಸ್ತಾನ ಸೇನೆ ಶರಣಾದ ಚಿತ್ರವನ್ನು ಭಾರತೀಯ ಸೇನಾ ಮುಖ್ಯಕಚೇರಿಯಿಂದ ತೆರವುಗೊಳಿಸಲಾಗಿದೆ ಎಂಬ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸೇನೆ, ‘ಅದನ್ನು ತೆಗೆದಿಲ್ಲ. ಬದಲಿಗೆ ಸೂಕ್ತ ಜಾಗದಲ್ಲಿ ಇಟ್ಟಿದ್ದೇವೆ’ ಎಂದು ಸ್ಪಷ್ಟನೆ ನೀಡಿದೆ.ಈ ಕುರಿತು ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ನಿರ್ದೇಶನಾಲಯ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ‘ಪಾಕಿಸ್ತಾನದ ವಿರುದ್ಧದ ವಿಜಯ ಹಾಗೂ ಬಾಂಗ್ಲಾ ರಚನೆಯ ನೆನಪಿಗೆ ಆಚರಿಸಲಾದ 43ನೇ ವಿಜಯ ದಿವಸದಂದು ಪಾಕ್‌ ಶರಣಾಗತಿ ಚಿತ್ರವನ್ನು ಮಾಣೆಕ್‌ ಶಾ ಕೇಂದ್ರದಲ್ಲಿ ಇಡಲಾಗಿದೆ’ ಎಂದು ತಿಳಿಸಿದೆ.